ಲಾಲ್ ಬಾಗ್ ನಲ್ಲಿ ಪ್ರೇಮಿಗಳಿಗೆ ಭದ್ರತೆ ಇದೆಯೇ?

ಇದಕ್ಕೆ ಉತ್ತರಿಸಿದ ತೋಟಗಾರಿಕೆ ಸಚಿವ ಉಮೇಶ್ ಕತ್ತಿ ಕುಡಿಯುವ ನೀರು, ಶೌಚಾಲಯ, ಲಾಲ್ ಬಾಗ್ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಉತ್ತರ ಕೊಟ್ಟರು. ಮಧ್ಯ ಪ್ರವೇಶಿಸಿದ ಜೆಡಿಯುನ ಡಾ.ಎಂ.ಪಿ.ನಾಡಗೌಡ ಅವರು, ಲಾಲ್ ಬಾಗ್ ಗೆ ಕೇವಲ ಭದ್ರತೆ ಕೊಟ್ಟರೆ ಸಾಲದು ಅದು ರೊಮ್ಯಾಂಟಿಕ್ ಪ್ಲೇಸ್ ಎಂದರು.
ಅಲ್ಲಿ ಯುವಕ, ಯುವತಿಯರು ಪ್ರೇಮಿಸಿಕೊಳ್ಳಲು ಹೋಗುತ್ತಾರೆ. ಅವರಿಗೂ ಭದ್ರತೆ ಕೊಡಬೇಕು ಎಂದು ಹೇಳುವ ಮೂಲಕ ಸದನದ ಗಮನ ಸೆಳೆದರು. ಪ್ರೇಮಿಗಳು ಸೇರಿದಂತೆ ಲಾಲ್ ಬಾಗ್ ಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸಹ ಲಾಲ್ ಬಾಗ್ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿಸಿ ಹೆಚ್ಚಿನ ಹಣ ಒದಗಿಸಿದ್ದಾರೆ. ಲಾಲ್ ಬಾಗ್ ಅಭಿವೃದ್ಧಿಗೆ ಈಗಾಗಲೆ ರು.30 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೆ ಅದನ್ನು ಕಾರ್ಯಗತಗೊಳಿಸುವುದಾಗಿ ಅವರು ತಿಳಿಸಿದರು.











Click it and Unblock the Notifications