ಸ್ಪೇನ್ ಪೋರ್ಚುಗಲ್ ಸಮಬಲದ ಸಮರ

ಸಮಬಲದ ಹೋರಾಟಕ್ಕೆ ಸಮರಾಂಗಣ ಸಜ್ಜಾಗಿದ್ದು, ಇಂಗ್ಲೆಂಡ್ ಹಾಗೂ ಜರ್ಮನಿ ಪಂದ್ಯದ ನಂತರ ಈ ಪಂದ್ಯವನ್ನು ಫುಟ್ಬಾಲ್ ಅಭಿಮಾನಿಗಳು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ಫೀಫಾ ಶ್ರೇಯಾಂಕದಂತೆ ಕ್ರಮವಾಗಿ 2ನೇ ಹಾಗೂ 3 ನೇ ಸ್ಥಾನದಲ್ಲಿರುವ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳಿಗೆ ದಾಳಿಗೆ ಹೆಗ್ಗುರುತು.
ಕ್ರಿಶ್ಚಿಯಾನೊ ರೊನಾಲ್ಡೊ Vs ಟೊರೆಸ್: ಈ ಇಬ್ಬರು ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿದರೆ, ಅದ್ಭುತ ಆಟವನ್ನು ನೋಡುವ ಸೌಭಾಗ್ಯ ಸಿಕ್ಕಂತೆಯೇ ಸೈ. ಆದರೆ, ರೊನಾಲ್ಡೊ, ಟೊರೆಸ್ ನಿರೀಕ್ಷಿತ ಆಟ ಪ್ರದರ್ಶನ ನೀಡಿಲ್ಲ. ಡೇವಿಡ್ ವಿಲ್ಲಾ ಸ್ಪೇನ್ ಗೆ ಯಶ ತಂದು ಕೊಡುವ ಎಲ್ಲಾ ಸಾಧ್ಯತೆಗಳಿವೆ.
ಇದುವರೆವಿಗೂ ಪರಸ್ಪರ 32 ಬಾರಿ ಎರಡು ತಂಡಗಳು ಎದುರಾಗಿದ್ದು, ಸ್ಪೇನ್ 15 ಬಾರಿ ವಿಜಯಿಯಾಗಿ ಯಶ ಕಂಡಿದೆ. ಎರಡೂ ತಂಡಗಳು ಆಕ್ರಮಣಕಾರಿ ಮನೋಭಾವ ಹೊಂದಿರುವುದರಿಂದ ರಕ್ಷಣಾ ಪಡೆ ಆಟಗಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ಸ್ಪೇನ್ ಪ್ರಮುಖ ಆಟಗಾರರು: ರೌಲ್ ಅಲ್ಬಿಯಲ್ ಪಂದ್ಯದಿಂದ ಹೊರಗುಳಿದಿರುವ ಕಾರಣ ಡಿಫೆಂಡರ್ ಗಳ ಪಡೆಯ ನೇತೃತ್ವವನ್ನು ಕಾರ್ಲೊಸ್ ಪುಯೋಲ್ ಹೊರುವ ಸಾಧ್ಯತೆಯಿದೆ. ಡೇವಿಡ್ ವಿಲ್ಲಾ, ಟೊರೆಸ್ , ಪೆಡ್ರೊ ಮುಂಪಡೆಯ ಹೊಣೆ ಹೊರಲಿದ್ದು, ಅಲಾನ್ಸೊ ಇಲ್ಲದ ಕಾರಣ ಮಾರ್ಟಿನೆಜ್, ಚವಿ ಮಿಡ್ ಫೀಲ್ಡ್ ನ ಕಾರ್ಯ ಕ್ಷಮತೆ ಹೆಚ್ಚಿಸಲಿದ್ದಾರೆ. ಗೇಮ್ ಪ್ಲಾನ್(1-4-4-2) ಬದಲಾಗುವ ಸಾಧ್ಯತೆ ಕಮ್ಮಿ.ರಕ್ಷಣೆ ಹೊತ್ತು ನೀಡಬಹುದು.
ಪೋರ್ಚುಗಲ್ ಪಡೆ : ರೊನೊಲ್ಡೊ ರಂತೆ ಹೂಗೊ ಅಲ್ಮೆಡಾ ಉತ್ತಮ ಲಯದಲ್ಲಿದ್ದು, ಮುಂಪಡೆಯ ಹೊಣೆ ಹೊರಲಿದ್ದಾರೆ. ಡೆಕೊ, ಟಿಯಾಗೊ, ಪೆಡ್ರೊ, ಮರೆಲೆಸ್ ಮಿಡ್ ಫೀಲ್ಡ್ ನಲ್ಲಿ ಉತ್ತಮವಾಗಿ ಆಡುತ್ತಿರುವ ಕಾರಣ (1-4-5-1) ಗೇಮ್ ಪ್ಲಾನ್ ನೊಂದಿಗೆ ಇಳಿಯುವ ಸಾಧ್ಯತೆಯಿದೆ.
ಬುಕ್ಕಿಗಳ ನಿರೀಕ್ಷೆಯಂತೆ ಪಂದ್ಯ ಡ್ರಾ ಆಗಿ ಪೆನಾಲ್ಟಿ ಶೂಟೌಟ್ ಮೂಲಕ ಗೋಲು ಗಳಿಸಿ ಗೆಲ್ಲುವ ಅವಕಾಶ ಪೋರ್ಚುಗಲ್ ಗೆ ಸಿಗಲಿದೆ. ಸ್ಪೇನ್ ರಕ್ಷಣಾ ಬಲ ಹೆಚ್ಚಿದರೆ, ಪೋರ್ಚುಗಲ್ ಮನೆಗೆ ಗ್ಯಾರಂಟಿ. ಹೆಚ್ಚುವರಿ ಅವಧಿಯಲ್ಲಿ ಪೋರ್ಚುಗಲ್ 1-0 ಗೆಲುವು ಸಾಧ್ಯತೆ ಕಂಡು ಬಂದಿದೆ.ಯಾರು ಗೆದ್ದರೂ ಕಡಿಮೆ ಅಂತರದ ಗೆಲುವು ಸಿಗುವ ಸಾಧ್ಯತೆ ಎಂದು ಹೇಳಲಾಗಿದೆ. ಯಾವುದಕ್ಕೂ ಇಂದು ಮಧ್ಯ ರಾತ್ರಿ ಇಎಸ್ ಪಿಎನ್ /ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಆನ್ ಮಾಡಿ ನೋಡಿ.












Click it and Unblock the Notifications