ರಿಲಯನ್ಸ್ ಮೊಬೈಲ್ ಗೋಪುರಗಳ ಹೆಚ್ಚಳ

ಹೊಸ ಕಂಪೆನಿ ಯಾವುದೇ ಕಂಪೆನಿಯ ಅಧೀನದಲ್ಲಿರದೇ, ವಿಶ್ವದ ಅತ್ಯಂತ ದೊಡ್ಡ ಸ್ವತಂತ್ರ ಕಂಪೆನಿಯಾಗಿ ಹೊರ ಹೊಮ್ಮಲಿದೆ. ಈ ಡೀಲ್ ನಿಂದ ರಿಲಯನ್ಸ್ ಕಮ್ಯುನಿಕೇಷನ್ಸ್ ಹೊಂಡಿರುವ ಸುಮಾರು 33,000 ಕೋಟಿ ರೂಪಾಯಿಗಳ ಸಾಲದಲ್ಲಿ 18 ಸಾವಿರ ಕೋಟಿ ರೂಪಾಯಿ ಕಡಿಮೆಯಾಗಲಿದೆ ಎನ್ನಲಾಗಿದೆ.
ಕಳೆದ 5 ವರ್ಷಗಳಿಂದ ಅಂಬಾನಿ ಸಹೋದರರ ನಡುವೆ ಇದ್ದ ಪರಸ್ಪರ ಸ್ಪರ್ಧಿಸದಿರುವ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ರಿಲಯನ್ಸ್ ಇನ್ಫ್ರಾಟೆಲ್ ದೇಶಾದ್ಯಂತ 2 ಲಕ್ಷ ಕಿಲೋಮೀಟರ್ ಆಪ್ಟಿಕ್ ಫೈಬರ್ ನೆಟ್ ವರ್ಕ್ ನ್ನು ಹೊಂದಿದ್ದು, ಜಿಟಿಎಲ್ ನೊಂದಿಗಿನ ವಿಲೀನದ ನಂತರ ರಿಲಯನ್ಸ್ ಕಮ್ಯುನಿಕೇಷನ್ಸ್ ನ ಪಾಲುದಾರಿಕೆಯೊಂದಿಗೆ ಮುಂದುವರಿಯಲಿದೆ.
ಈ ವಿಲೀನದೊಂದ ಹೊಸ ಕಂಪೆನಿಯಲ್ಲಿ ರಿಲಯನ್ಸ್ ಕಮುನಿಕೇಶನ್ಸ್ ನ ಶೇರುದಾರರು ಅನುಪಾತದ ಪ್ರಕಾರದಲ್ಲಿ ಶೇರುಗಳನ್ನು ಪಡೆಯಲಿದ್ದು ಇದು ಇನ್ನೂ ನಿರ್ಧಾರವಾಗಬೇಕಿದೆ . ಈ ಕುರಿತು ಹೇಳಿಕೆ ನೀಡಿರುವ ಏಡಿಏ ಸಮೂಹ ಸ್ವತಂತ್ರ ಸಲಹೆಗಾರರು ಹಾಗೂ ಮೌಲ್ಯ ಮಾಪಕರು ಶೇರುಗಳ ಅನುಪಾತವನ್ನು ನಿರ್ಧರಿಸಲಿದ್ದಾರೆ ಎಂದಿದೆ.
ವಿಲೀನದ ನಂತರ ಹೊಸ ಕಂಪೆನಿಯ ದೂರಸಂಪರ್ಕ ಗೋಪುರಗಳ ಸಂಖ್ಯೆ 80 ಸಾವಿರಕ್ಕೇರಲಿದೆ. ಹೊಸ ಕಂಪೆನಿ 10 ಟೆಲಿಕಾಮ್ ಆಪರೇಟರ್ ಗಳ 1.25 ಲಕ್ಷ ಟೆನೆನ್ಸಿಗಳನ್ನು ಹೊಂದಿದೆ. ಹೊಸ 3ಜಿ ಆಪರೇಟರ್ ಗಳ ಮಾರುಕಟ್ಟೆ ಪ್ರವೇಶದಿಂದ ಕಂಪೆನಿಗೆ ಹೆಚ್ಚಿನ ಆದಾಯ ಲಭಿಸಲಿರುವುದಾಗಿ ಹೇಳಲಾಗಿದೆ.












Click it and Unblock the Notifications