ರಾಷ್ಟ್ಟ್ರಧ್ವಜ ತಲೆಕೆಳಗಾದರೂ ಇವರಿಗೆ ಲೆಕ್ಕಕ್ಕಿಲ್ಲ

ಚಿದಂಬರಂ ಅವರು ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರನ್ನು ಭೇಟಿಯಾದ ವೇಳೆ ಈ ಅವಘಡ ಸಂಭವಿಸಿದೆ. ಉಭಯ ರಾಷ್ಟ್ರಗಳ ಧ್ವಜವನ್ನು ಹಾರಿಸಲಾಗಿತ್ತಾದರೂ ಇದರಲ್ಲಿ ಭಾರತದ ಧ್ವಜ ಮಾತ್ರ ಉಲ್ಟಾ ಹಾರುತ್ತಿತ್ತು.
ಇಷ್ಟೆಲ್ಲ ಅವಮಾನವಾಗಿದ್ದರೂ ಚಿದಂಬರಂ ಮಾತ್ರ ಏನೂ ಆಗಿಲ್ಲವೆಂಬಂತೆ ಪ್ರತಿಕ್ರಿಯೆ ನೀಡಿದ್ದಾರೆ. ಕಣ್ತಪ್ಪಿನಿಂದಾಗಿ ಧ್ವಜ ಮೇಲೆ ಕೆಳಗಾಗಿರುವುದು ನಿಜ. ಆದರೆ ಈ ಲೋಪ ಗಮನಕ್ಕೆ ಬಂದ ನಂತರ ಸರಿಪಡಿಸಲಾಯಿತು ಎಂದು ಚಿದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಮೂರು ದಶಕಗಳ ನಂತರ ಭಾರತದ ಗೃಹ ಸಚಿವರೊಬ್ಬರು ಪಾಕ್‌ಗೆ ಭೇಟಿ ನೀಡಿದ್ದ ವೇಳೆ ಈ ಅವಾಂತರ ಸೃಷ್ಟಿಯಾಗಿತ್ತು. ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದಲೇ ಅವರನ್ನು ಸ್ವತ: ಮಲಿಕ್ ಅವರು ಸ್ವಾಗತಿಸಿ ನಂತರ ಮಾತುಕತೆ ನಡೆಸಿದ್ದರು.












Click it and Unblock the Notifications