ಮಹಿಳೆಯ ಮೇಲೆ ಗಂಡನ ಸಂಬಂಧಿಕರಿಂದ ಅತ್ಯಾಚಾರ

ಮದುವೆ ಮುಗಿದ ಬಳಿಕ ತಮ್ಮ ಗಂಡನ ಇಬ್ಬರು ಸೋದರ ಸಂಬಂಧಿಗಳು ಅಮೃತಸರದ ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಹೇಳಿದರು. ಕಾರಿನಲ್ಲಿ ಕರೆದೊಯ್ದ ಅವರು ದಾಬಾವೊಂದರ ಬಳಿ ನಿಲ್ಲಿಸಿ ಪಾನೀಯ ತೆಗೆದುಕೊಳ್ಳುವಂತೆ ಬಲವಂತ ಮಾಡಿದರು. ಅದೇ ಸಮಯದಲ್ಲಿ ದಾಬಾ ಬಳಿಗೆ ಮತ್ತಿಬ್ಬರು ಬಂದರು.
ಮತ್ತು ಪಾನೀಯ ಕುಡಿದ ದಂಪತಿಗಳು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಈ ನಾಲ್ಕು ಮಂದಿ ಸೇರಿ ದಂಪತಿಗಳನ್ನು ಥಾಥರಿ ಗೇಟ್ ಪ್ರದೇಶದ ಮನೆಯೊಂದಕ್ಕೆ ಸಾಗಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಆಕೆಯ ಗಂಡ ಮತ್ತೊಂದು ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಬಳಿಕ ಈ ದಂಪತಿಗಳು ಲೂಧಿಯಾನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಈ ಘಟನೆ ಬಟಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಲೂಧಿಯಾನ ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.












Click it and Unblock the Notifications