ವಿಂಬಲ್ಡನ್ ನ ಐತಿಹಾಸಿಕ ಪಂದ್ಯಮುಕ್ತಾಯ!

ಲಂಡನ್, ಜೂ.25: ಟೆನ್ನಿಸ್ ಇತಿಹಾಸದಲ್ಲಿ ಅಭೂತಪೂರ್ವ ದಾಖಲೆ ನಿರ್ಮಾಣಗೊಂಡಿದೆ. ಅಮೆರಿಕದ ಜಾನ್ ಇಸ್ನರ್ ಹಾಗೂ ಫ್ರಾನ್ಸ್ ನ ನಿಕೋಲಸ್ ಮಹೂತ್ ಗೆಲುವಿಗಾಗಿ 11 ಗಂಟೆ 5 ನಿಮಿಷಗಳ ಕಾಲ ಸತತವಾಗಿ ಶ್ರಮಿಸಿ ಇತಿಹಾಸ ರಚಿಸಿದ್ದಾರೆ.

ಟೈ ಬ್ರೇಕರ್ ಸೆಟ್ ನಲ್ಲಿ 50-59 ಅಂಕಗಳಾಗಿದ್ದಾಗ ಇವರಿಬ್ಬರ ನಡುವಿನ ಪಂದ್ಯಕ್ಕೆ ಬೆಳಕಿನ ಅಭಾವ ಕಂಡು ಬಂದು, ಸ್ಥಗಿತಗೊಳಿಸಲಾಗಿತ್ತು. ಪಂದ್ಯದ ಕೊನೆಯ ಸೆಟ್ ಆಟದ ಸಮಯ 7 ಗಂಟೆ 6 ನಿಮಿಷವಾಗಿತ್ತು. ಇದು ಕೂಡಾ ದಾಖಲೆ ಎನಿಸಿದೆ.

ದಾಖಲೆ ಬರೆದ ಸುದೀರ್ಘ ಪಂದ್ಯದಲ್ಲಿ ಮಹೂತ್ (148 ನೇಶ್ರೇಯಾಂಕಿತ)ಅವರನ್ನು 6-4, 3-6, 6-7 (7-9), 7-6 (7-3), 70-68 ರಲ್ಲಿ ಇಸ್ನಾರ್(23ನೇ ಶ್ರೇಯಾಂಕಿತ) ಸೋಲಿಸಿದರು. ಜೂ.22 ರಂದು ಬೆಳಕಿನ ಅಭಾವದ ಕಾರಣದಿಂದ ಸ್ಥಗಿತಗೊಂಡಿದ್ದ ಪಂದ್ಯ, ಜೂ. 24 ಗುರುವಾರ ಅಂತ್ಯಗೊಂಡಿತು.

ಇದುವರೆವಿಗೂ 2004 ರ ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ 6 ಗಂಟೆ 33 ನಿಮಿಷಗಳ ಕಾಲ ನಡೆದ ಪಂದ್ಯವೇ ಸುದೀರ್ಘ ಪಂದ್ಯ ಎಂಬ ಖ್ಯಾತಿ ಹೊಂದಿತ್ತು. ಆದರೆ, ಹಲವು ಅಚ್ಚರಿಗಳನ್ನು ನೀಡುವ ವಿಂಬಲ್ಡನ್ ಅಂಗಳದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಾಣವಾಗಿದೆ.

1973 ರಲ್ಲಿ 122 ಗೇಮ್ ಗಳನ್ನು ಕಂಡಿದ್ದ ಡೇವಿಸ್ ಕಪ್ ಪಂದ್ಯ ಕೂಡಾ ದೀರ್ಘಾವಧಿ ಪಂದ್ಯಗಳ ಪಟ್ಟಿಯಲ್ಲಿದೆ. 1877 ರಲ್ಲಿ ಆರಂಭವಾದ ವಿಂಬಲ್ಡನ್ ಇತಿಹಾಸದಲ್ಲಿ 1969 ರಲ್ಲಿ ನಡೆದ ಪಂದ್ಯವೊಂದು 112 ಗೇಮ್ ಗಳನ್ನು ಕಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+