ಪಾಕ್ ನಲ್ಲಿ ಗೂಗಲ್, ಯಾಹೂ, ಯೂ ಟ್ಯೂಬ್ ನಿಷೇಧ

Pakistan court bans Google, Yahoo
ಇಸ್ಲಾಮಾಬಾದ್, ಜೂ.24: ಧರ್ಮ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಗೂಗಲ್, ಹಾಟ್ ಮೇಲ್ ಸೇರಿದಂತೆ ಒಟ್ಟು ಒಂಭತ್ತು ವೈಬ್ ಸೈಟ್ ಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವೈಬ್ ಸೈಟ್ ಗಳು ತಿಳಿಸಿವೆ.

ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರಕ್ಕೆ ಲಾಹೋರ್ ಹೈಕೋರ್ಟ್ ನ ಬಹವಲ್ ಪುರ ನ್ಯಾಯಪೀಠ ಈ ವೆಬ್ ಸೈಟ್ ಗಳನ್ನು ನಿಷೇಧಿಸುವಂತೆ ಆದೇಶಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಗೂಗಲ್, ಯಾಹೂ, ಎಂಎಸ್ ಎನ್, ಹಾಟ್ ಮೇಲ್, ಯೂ ಟ್ಯೂಬ್, ಬಿಂಗ್ ಹಾಗೂ ಅಮೆಜಾನ್ ಸೇರಿದಂತೆ ಒಟ್ಟು ಒಂಭತ್ತು ವೆಬ್ ಸೈಟ್ ಗಳನ್ನು ನಿಷೇಧಿಸಲಾಗಿದೆ.

ಈ ವೆಬ್ ಸೈಟ್ ಗಳು ಧರ್ಮ ನಿಂದನೆ ಹಾಗೂ ಅಲ್ಲಾ ಬಗ್ಗೆ ಅಪಚಾರವೆಸಗಿವೆ ಎಂದು ಆರೋಪಿಸಿ ಮಹಮ್ಮದ್ ಸಿದ್ದಿಕ್ ಎಂಬುವವರು ನ್ಯಾಯಾಲಕ್ಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಜರ್ ಇಕ್ಬಾಲ್ ಸಿಧು ಅವರಿದ್ದ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.

ಖುರಾನ್ ಬಗ್ಗೆಯೂ ಇಲ್ಲಸಲ್ಲದ ಮಾಹಿತಿಗಳು ಈ ವೆಬ್ ಸೈಟ್ ಗಳಲ್ಲಿವೆ ಎಂದು ಸಿದ್ಧಿಕ್ ದೂರಿನಲ್ಲಿ ಆರೋಪಿಸಿದ್ದರು. ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷರು ಜೂ.28ರಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಇಕ್ಬಾರ್ ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+