ಅಮೆರಿಕದ ಅದೃಷ್ಟ, ಬದಲಾಗದ ಇಂಗ್ಲೆಂಡ್
ಪ್ರಥಮಾರ್ಧದಲ್ಲಿ ಬಂದ ಈ ಏಕೈಕ ಗೋಲು ವಿಶ್ವಕಪ್ ಫುಟ್ಬಾಲ್‌ನಲ್ಲಿ ಇಂಗ್ಲೆಂಡ್‌ಗೆ ಜೀವದಾನ ನೀಡಿತು. ಡೆಫೋ ಬಾರಿಸಿದ ಗೋಲಿನಿಂದಾಗಿಯೇ ಇಂಗ್ಲೆಂಡ್ ಸಿ ಗುಂಪಿನಲ್ಲಿ ದ್ವಿತೀಯ ಸ್ಥಾನಿಯಾಗಿ ನಾಕೌಟ್ ಹಂತ ತಲುಪಿತು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ನಿನ್ನೆ ಪ್ರಿಟೋರಿಯಾದಲ್ಲಿ ನಡೆದ ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಅಮೆರಿಕ ತಂಡ 90 ನಿಮಿಷದ ನಂತರದ ಹೆಚ್ಚುವರಿ ಅವಧಿಯಲ್ಲಿ ಡೊನೊವನ್ ಹೊಡೆದ ಏಕೈಕ ಗೋಲಿನ ಸಹಾಯದಿಂದ ಅಲ್ಜೀರಿಯಾವನ್ನು ಮಣಿಸಿ ಗುಂಪಿನಲ್ಲಿ ಆಗ್ರಸ್ಥಾನ ಪಡೆದು 16 ರ ಹಂತ ತಲುಪಿದೆ.
ಬದಲಾಗದ ಇಂಗ್ಲೆಂಡ್ : ಸ್ಲೊವೇನಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಗೆಲುವು ಅನಿವಾರ್ಯವಾಗಿತ್ತು. ತಂಡದ ತರಬೇತುದಾರ ಫ್ಯಾಬಿಯೋ ಕಪೆಲೋ ಆಟಗಾರರನ್ನು ಎಚ್ಚರಿಕೆಯಿಂದಲೇ ಸಜ್ಜುಗೊಳಿಸಿದ್ದರೂ, ಇಂಗ್ಲೆಂಡ್ ನಿರೀಕ್ಷೆಗೆ ತಕ್ಕ ಆಟವಾಡಲಿಲ್ಲ.
ಮತ್ತೆ ವೈಫಲ್ಯ ಕಂಡ ಮುಂಪಡೆ ಆಟಗಾರ ವೇಯ್ನ್ ರೂನಿಯನ್ನು ಕಪೆಲೋ ಅಂತಿಮ ಕ್ಷಣದಲ್ಲಿ ಬದಲಿಸಬೇಕಾಯಿತು. ಇದರಿಂದ ಮುನಿಸಿಕೊಂಡ ರೂನಿ, ಪ್ಲೇಯರ್ಸ್ ಡೆಕ್ ಗೆ ಬಂದಾಗ ಕಪೆಲೋ ಕೈ ಸಹಾ ಕುಲುಕಲಿಲ್ಲ.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
16 ರ ಹಂತದಲ್ಲಿ ಅಮೆರಿಕದ ಅದೃಷ್ಟ: ಮೂರು ಪಂದ್ಯಗಳಿಂದ ಇಂಗ್ಲೆಂಡ್ ಹಾಗೂ ಯುಎಸ್ ಎ ತಲಾ 5 ಅಂಕಗಳಿಸಿದ್ದರೂ, ಪರ ಗೋಲುಗಳ ಅಂತರದಲ್ಲಿ ಯುಎಸ್ ಎ ಮುಂದಿರುವುದರಿಂದ ಸಿ ಗುಂಪಿನ ಅಗ್ರಸ್ಥಾನ ಪಡೆಯಿತು.
ಇದರಿಂದ ಯುಎಸ್ ಎ ಗೆ ಲಾಭವೋ ಲಾಭ. ಜರ್ಮನಿ ವಿರುದ್ಧ ಆಡುವುದನ್ನು ತಪ್ಪಿಸಿಕೊಂಡಿದೆ. ಜೂ.26 ರಂದು ನಾಕೌಟ್ ಹಂತದಲ್ಲಿ ಘಾನವನ್ನು ಯುಎಸ್ಎ, ಎದುರಿಸಲಿದೆ. ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ಪ್ರಬಲ ಎದುರಾಳಿ ಜರ್ಮನಿಯನ್ನು ಜೂ.27 ರಂದು ಎದುರಿಸಬೇಕಾಗಿದೆ.












Click it and Unblock the Notifications