ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಪೋರ್ಟ್ ವಾಯುವಜ್ರ ಬಸ್ ನಲ್ಲಿ ಇಂಟರ್ ನೆಟ್

By Mahesh
|
Google Oneindia Kannada News

Volvo bus
ಬೆಂಗಳೂರು, ಜೂ.23: ಬೆಂಗಳೂರಿನ ಕಂಟೋನ್ಮೆಂಟ್, ಮಲ್ಲೇಶ್ವರಂ, ಯಶವಂತಪುರ, ಕೆಆರ್ ಪುರಂ ರೈಲ್ವೆ ನಿಲ್ದಾಣಗಳಿಂದ ನಗರದ ವಿವಿಧ ಭಾಗಕ್ಕೆ ಇನ್ನೊಂದು ವಾರದಲ್ಲಿ 40 ಬಸ್‌ಗಳು ಸಂಚರಿಸಲಿವೆ. ಇದಲ್ಲದೆ ಮೂರು ಮಿನಿ ಬಸ್‌ಗಳು ರೈಲ್ವೆ ನಿಲ್ದಾಣಗಳಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯಲಿವೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದರು.

ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಮಿನಿ ಬಸ್‌ಗಳ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಲ್ಲಿ ಬಸ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು.

ಈ ವ್ಯವಸ್ಥೆ ಜಾರಿಗೆ ಆಟೋ ಚಾಲಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಯೋಜನೆ ಕೈ ಬಿಡುವುದಿಲ್ಲ ಎಂದು ಸಚಿವ ಅಶೋಕ್ ಹೇಳಿದರು.

ಏರ್‌ಪೋರ್ಟ್ ವಾಯು ವಜ್ರ ಬಸ್‌ನಲ್ಲಿ ಕಂಪ್ಯೂಟರ್!

ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಒಂದು ವೊಲ್ವೋ ಬಸ್‌ನ ಎಲ್ಲ ಸೀಟಿಗೂ ಕಂಪ್ಯೂಟರ್ ಅಳವಡಿಕೆಯಾಗಲಿದೆ. ಎಲ್ಲ ಕಂಪ್ಯೂಟರ್‌ಗಳೂ ಇಂಟರ್‌ನೆಟ್ ವ್ಯವಸ್ಥೆ ಹೊಂದಿರುವುದು ಇನ್ನೊಂದು ವಿಶೇಷ. ಏರ್‌ಪೋರ್ಟ್‌ಗೆ ತೆರಳುವ ಬಸ್‌ಗಳಿಗೂ ಹೊಸ್ಟೆಸ್‌ಗಳನ್ನು ನೇಮಿಸುವ ವಿಚಾರ ಸರ್ಕಾರದ ಮುಂದಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕಂಪನಿ ಜಾಹೀರಾತಿನಿಂದ ಈ ಆದಾಯ ಸರಿದೂಗಿಸಿಕೊಳ್ಳಲಿರುವುದರಿಂದ ಪ್ರಯಾಣಿಕರ ಮೇಲೆ ಯಾವುದೇ ಹೆಚ್ಚಿನ ಹೊರೆ ಬೀಳುವುದಿಲ್ಲ. ಈ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಯಶಸ್ವಿಯಾದರೆ ಉಳಿದ ಬಸ್‌ಗಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X