ಕೆಂಪು ಬೀದಿ ಮಹಿಳೆಯರಿಗೆ ಪೊಲೀಸ್ ರೆಡ್ ಕಾರ್ಡ್

ಲೈಂಗಿಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾದ ಪೊಲೀಸರು ಪ್ರವಾಸಿಗರು ಲೈಂಗಿಕ ಕಾರ್ಯಕರ್ತೆಯರಿಗೆ ಸಿಗಲಾರದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ವ್ಯಾಪಾರಕ್ಕೆ ಭಾರೀ ನಷ್ಟವಾಗುತ್ತಿದೆ ಎಂಬುದು ಲೈಂಗಿಕ ಕಾರ್ಯಕರ್ತೆಯರ ಅಳಲು.
ನಮಗೂ ಮಕ್ಕಳಿದ್ದಾರೆ. ಇಲ್ಲಿಗೆ ದುಡ್ಡು ಮಾಡೋಣವೆಂದು ಬಂದರೆ, ಪೊಲೀಸರು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೆಂಪು ಬೀದಿಯ ಮಹಿಳೆಯೊಬ್ಬಳು ಅಲವತ್ತುಕೊಂಡಿದ್ದಾಳೆ.
ಕಳೆದ 20 ವರ್ಷಗಳಿಂದ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಇನ್ನೊಬ್ಬ ಮಹಿಳೆ ಪ್ರಕಾರ, ಗಿರಾಕಿಗಳು ತಮಗೆ ಸಿಗಬೇಕಿದ್ದರೆ ಪೊಲೀಸರಿಗೆ ಲಂಚ ನೀಡಬೇಕು. ಕೊಡದಿದ್ದರೆ ಅವರು ನಮ್ಮನ್ನೇ ಬಳಸಿಕೊಳ್ಳುತ್ತಿದ್ದಾರೆ. ಇದು ಅತ್ಯಾಚಾರವಲ್ಲದೆ ಇನ್ನೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಆದರೆ, ಎಚ್ ಐ ವಿ ಕುರಿತ ಹೆದರಿಕೆ ಲೈಂಗಿಕ ಕಾರ್ಯಕರ್ತೆಯರ ವ್ಯಾಪಾರ ಹೆಚ್ಚು ಕುದುರದಿರಲು ಕಾರಣ ಎಂದೂ ಹೇಳಲಾಗುತ್ತಿದೆ. ಸುರಕ್ಷಿತ ಲೈಂಗಿಕ ಕ್ರಿಯೆ ಕಾರ್ಯಕರ್ತೆಯರು ನಡೆಸುತ್ತಿದ್ದರೂ ಹಲವರು ಕಾಂಡೋಮ್ ಬಳಸಲು ಹಿಂಜರಿಯುತ್ತಿದ್ದಾರೆ.











Click it and Unblock the Notifications