ಲೈವ್ ಬ್ಯಾಂಡ್ ಬೆಡಗಿಯರು ಪೊಲೀಸ್ ಬಲೆಗೆ
ಬೆಂಗಳೂರು,
ಜೂ.20: ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶುಭಂ ರೆಸ್ಟೋರೆಂಟ್ ನ ಮೇಲೆ ದಾಳಿ ನಡೆಸಿದ ಪೊಲೀಸರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಸುಮಾರು 44 ಲೈವ್ ಬ್ಯಾಂಡ್ ಯುವತಿಯರನ್ನು ಹಾಗೂ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. id="toptextpromo">ಕೋರಮಂಗಲ
ರಿಂಗ್ ರಸ್ತೆ ಬಳಿಯ ಈ ರೆಸ್ಟೋರೆಂಟ್ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಲಾಗಿದ್ದು, ವಿವೇಕ್ ಹಾಗೂ ಮುನ್ನಾ ಎಂಬುವವರನ್ನು ಬಂಧಿಸಲಾಗಿದೆ. ಈ ಇಬ್ಬರು ಬಂಧಿತರು ಲೈವ್ ಬ್ಯಾಂಡ್ ಕುಣಿತಕ್ಕೆ ಉತ್ತರಪ್ರದೇಶದಿಂದ ಹುಡುಗಿಯರನ್ನು ಪೂರೈಸುತ್ತಿದ್ದರು. ಸೆರೆ ಸಿಕ್ಕಿರುವ 44 ಲೈವ್ ಬ್ಯಾಂಡ್ ಯುವತಿಯರು ಕೂಡಾ ಉತ್ತರಪ್ರದೇಶ ಮೂಲದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಧ್ಯರಾತ್ರಿ
ನಂತರ ಹೆಚ್ಚುವರಿ ಅವಧಿ ಮದ್ಯ ಪೂರೈಕೆಗೆ ಬೇಕು ಎಂದು ಅಬಕಾರಿ ಸಚಿವರು ಪಟ್ಟು ಹಿಡಿದಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಶುಭಂ ರೆಸ್ಟೋರೆಂಟ್ ನಲ್ಲಿ ಲೈವ್ ಬ್ಯಾಂಡ್ ನಡೆಸುತ್ತಿರುವ ಬಗ್ಗೆ ಈ ಮುಂಚೆ ಕೂಡಾ ಮಾಹಿತಿ ಸಿಕ್ಕಿತ್ತು, ಪಬ್ ಮಾಲೀಕರಿಗೆ ಎಚ್ಚರಿಕೆ ನೀಡಿದರೂ ಲೈವ್ ಬ್ಯಾಂಡ್ ಮುಂದುವರೆಸಿದ್ದರು. ವಿವೇಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.











Click it and Unblock the Notifications