ಕಾಲೇಜಲ್ಲಿ ಜೀನ್ಸ್ ನಿಷೇಧ ವಿರೋಧಿಸಿ ಪ್ರತಿಭಟನೆ

Jeans Pant ban in SJRC, Bangalore
ಬೆಂಗಳೂರು, ಜೂ.18: ಜೀನ್ಸ್‌ಪ್ಯಾಂಟ್ ಹಾಕುವವರಿಗೆ ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂಬ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ನಿಯಮವನ್ನು ಖಂಡಿಸಿ ಬೆಂಗಳೂರು ನಗರ ವಿದ್ಯಾರ್ಥಿ ಕಾಂಗ್ರೆಸ್ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಆನಂದರಾವ್ ಸರ್ಕಲ್‌ನಲ್ಲಿ ಇರುವ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ನಗರ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆಯ ಅಧ್ಯಕ್ಷ ಪ್ರಭಾಕರ್, ಇತ್ತೀಚಿನ ದಿನಗಳಲ್ಲಿ ಸಾಧಾರಣ ಉಡುಪು (ಫಾರ್ಮಲ್ಸ್ ಬಟ್ಟೆ)ಗಳು ಜೀನ್ಸ್ ಪ್ಯಾಂಟ್‌ಗಿಂತ ದುಬಾರಿಯಾಗಿದೆ. ಹೀಗಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಾಧಾರಣ ಉಡುಪು ಧರಿಸುವುದು ಕಷ್ಟ.

ಆದ್ದರಿಂದ ಜೀನ್ಸ್ ಪ್ಯಾಂಟ್‌ಗೆ ಅವಕಾಶ ಕೊಡಬೇಕು ಎಂದರು. ಕಾಲೇಜಿನಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡಿ ಕಡಿಮೆ ಶುಲ್ಕದ ರಶೀದಿಯನ್ನು ಕೊಡುತ್ತಿದ್ದಾರೆ, ಅಲ್ಲದೆ ಶಾಲೆಯಲ್ಲಿ ಪೇಂಟಿಂಗ್, ಫ್ಯಾನ್ ಹಾಕಿಸಲು ಹಣ ವಸೂಲಿ ಮಾಡಿ ಇದುವರೆಗೂ ಮಾಡಿಸದೆ ತಮಗೆ ವಂಚಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.

ಸಮಸ್ಯೆಗಳ ಬಗ್ಗೆ ಕೇಳಿದರೆ ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ಇತರೆ ವಿಚಾರಗಳಿಗೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆ ನಿಲ್ಲಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+