ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಗೋಳು

ನವದೆಹಲಿ, ಜೂ. 17 : ಉತ್ತಮವಾಗಿ ಸಂಸಾರ ನಡೆಯಬೇಕೆಂದರೆ ಮದುವೆಯಾದ ಹೆಣ್ಣಿಗೆ ಸಹನೆಯಿರಬೇಕು. ಆದರೆ, ನಮ್ಮ ದೇಶದ ರಾಜಧಾನಿಯಲ್ಲಿ ಗಂಡ ಮತ್ತು ಮನೆಯವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣಿನಷ್ಟು ಇರಬಾರದು.

ಮದುವೆಯಾದ ಗಂಡ ತನ್ನ ಹೆಂಡತಿಯನ್ನು ಸತತ ನಾಲ್ಕು ವರ್ಷಗಳ ಕಾಲ ತನ್ನ ವ್ಯಾಪಾರಿ ಸಂಗಾತಿಗಳು ಮತ್ತು ಕುಟುಂಬ ಸದಸ್ಯರ ಜೊತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಅಮಾನವೀಯತೆ ಮೆರೆದಿದ್ದಾನೆ. ಆ ಅಮಾಯಕಿ ಮಹಿಳೆಯ ಸಂಬಂಧಿಯೊಬ್ಬರಿಗೆ ಪ್ರಾಣ ಬೆದರಿಕೆ ಒಡ್ಡಿದ್ದರಿಂದ ನಾಲ್ಕು ವರ್ಷಗಳ ಕಾಲ ಈ ಮಾನಸಿಕ ಹಿಂಸೆಯನ್ನು ಸತತವಾಗಿ ಸಹಿಸಿಕೊಂಡು ಬಂದಿದ್ದಾಳೆ.

ಲೈಂಗಿಕ ದಬ್ಬಾಳಿಕೆ ಮಿತಿಮೀರಿದಾಗ ತನ್ನ ತವರೂರು ಸೂರತ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ರಫ್ತು ವ್ಯಾಪಾರದಲ್ಲಿ ತೊಡಗಿದ್ದ ಆಕೆಯ ಗಂಡ ಕುಲದೀಪಕ್ ಆರೋರಾ ಎಂಬಾತನನ್ನು ಎಜಿಐ ಏರ್ಪೋರ್ಟಿನಲ್ಲಿ ಆತ ನೇಪಾಳಕ್ಕೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆರೋರಾ ಕುಟುಂಬದ ಸದಸ್ಯರು ತಲೆಮರೆಸಿಕೊಂಡಿದ್ದಾರೆ.

ಮಾಧ್ಯಮದಲ್ಲಿ ವರದಿಯಾಗಿರುವ ಪ್ರಕಾರ, ಮದುವೆ ಜಾಹೀರಾತನ್ನು ನೋಡಿ ಆಕೆ ಆರೋರಾನನ್ನು 2003ರಲ್ಲಿ ಲಂಡನ್ ನಲ್ಲಿ ಭೇಟಿಯಾಗಿದ್ದಳು. 2004ರಲ್ಲಿ ಅವರಿಬ್ಬರ ಮದುವೆಯಾಗಿತ್ತು. ಕೆಲವರ್ಷ ಸಂಸಾರ ಸುಸೂತ್ರವಾಗಿಯೇ ನಡೆದಿದೆ. ನಂತರ ಕುಟುಂಬದವರು ಹೆಚ್ಚಿನ ವರದಕ್ಷಿಣೆ ತರಲು ಒತ್ತಾಯಿಸಿದ್ದಾರೆ. ಆಕೆ ನಿರಾಕರಿಸಿದಾಗ, ತನ್ನ ವ್ಯಾಪಾರಿ ಸ್ನೇಹಿತರು, ಸಹೋದರ, ಸಹೋದರ ಸಂಬಂಧಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಗಂಡ ಮಾಡಿದ್ದಾನೆ. ಆತ ಈ ಮದವೆಯ ಮೊದಲು ಮತ್ತೊಂದು ಮದುವೆಯಾಗಿದ್ದ ಮತ್ತು ಮೊದಲ ಹೆಂಡತಿಗೆ ವಿಚ್ಛೇದನವನ್ನೂ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+