ಫುಟ್ಬಾಲ್ ಪಂಡಿತರಲ್ಲಿ ಒಂದು ಅರಿಕೆ
ಪ್ರಸಕ್ತ
ವಿಶ್ವಕಪ್ ಫುಟ್ಬಾಲ್ ಪಂದ್ಯಗಳ ಬಗ್ಗೆ ಈ ತಾಣದಲ್ಲಿ ನಾನು ಆಗಾಗ ಕಿರುಬರಹಗಳನ್ನು ಬರೆಯುತ್ತಿರುವುದು ಸಾಮಾನ್ಯ ಓದುಗರಿಗಾಗಿ. ಫುಟ್ಬಾಲ್ ಪಂಡಿತರಿಗೆ ಬೇರೆಡೆ ಆಳವಾದ ಲೇಖನಗಳು ಮತ್ತು ವಿಶ್ಲೇಷಣಾತ್ಮಕ ವರದಿಗಳು ಓದಲು ಸಿಗುತ್ತವೆ. ಇಂಗ್ಲಿಷ್ ಪಂಡಿತ ಎಕ್ಸ್‌ವೈಝಡ್ ವಿದ್ವಾಂಸರಿಗಂತೂ ಅಂಥ ಸಾವಿರ ವರದಿಗಳು ಅಂತರ್ಜಾಲದಲ್ಲಿ ದೊರೆಯುತ್ತವೆ. ಸಾಮಾನ್ಯ ಕನ್ನಡಿಗರಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಕುತೂಹಲ ಮೂಡಿಸುವ ಮೂಲಕ ಅವರನ್ನು ಆ ಕ್ರೀಡೆಯತ್ತ ಸೆಳೆಯುವುದಷ್ಟೇ ನನ್ನ ಕಿರುಬರಹಗಳ ಉದ್ದೇಶ. ಅದಕ್ಕಾಗಿ, ಆಟಗಳ ಸೈಡ್‌ಲೈಟ್ಸ್ ಎನ್ನಬಹುದಾದ ಅಂಶಗಳ ಪ್ರಸ್ತಾಪವನ್ನು ಉದ್ದೇಶಪೂರ್ವಕವಾಗಿ ಮತ್ತು ವಿಶೇಷವಾಗಿ ಮಾಡುತ್ತೇನೆ. (ಆಸ್ಟ್ರೇಲಿಯಾ ಬಗ್ಗೆ ನಾನು ಬರೆದ ಬರಹವನ್ನು ಈ ದೃಷ್ಟಿಯಿಂದ ನೋಡಬೇಕು.) id="toptextpromo">ಬೆಳಗಿನ
ಜಾವ ಎರಡು ಗಂಟೆಗೆ ಮುಗಿದ ಆಟದ ಇಂಥ ಸೈಡ್‌ಲೈಟ್ಸ್ ಅಂಶಗಳು ಅದೇ ದಿನದ ಯಾವ ಪತ್ರಿಕೆಯಲ್ಲೂ ಪ್ರಕಟಗೊಂಡಿರುವುದಿಲ್ಲ. (ಒಂದು ಪತ್ರಿಕೆಯಲ್ಲಿ ಸಂಕ್ಷಿಪ್ತ ವರದಿ ಮಾತ್ರ ಪ್ರಕಟವಾಗುತ್ತಿದೆ.) ಆದ್ದರಿಂದ, ಬೆಳಗ್ಗೆ ಈ ಜಾಲತಾಣಕ್ಕೆ ಭೆಟ್ಟಿ ನೀಡಿದ ಸಾಮಾನ್ಯ ಓದುಗರು ಕೆಲ ಗಂಟೆಗಳ ಕೆಳಗಷ್ಟೇ ಮುಗಿದ ಆಟದ ಫಲಿತಾಂಶದ ಜೊತೆಗೆ ಒಂದು ಸ್ಥೂಲ ಕಿರುಚಿತ್ರಣವನ್ನೂ ಮತ್ತು ಸೈಡ್‌ಲೈಟ್ಸ್ ಸ್ವಾರಸ್ಯಗಳನ್ನೂ ಸವಿಯಲಿ ಎಂಬುದಷ್ಟೇ ನನ್ನ ಬರಹಗಳ ಉದ್ದೇಶ. id='are-slot-1' class='oiad oi-axt oiadv'> id='top-searched-articles'>ಫುಟ್ಬಾಲ್
ಕ್ರೀಡೆಯ ಬಗ್ಗೆ ನನಗೆ ಸಾಕಷ್ಟು ಪರಿಣತಿ ಇದೆ. ಆದರೆ ಅದನ್ನಿಲ್ಲಿ ಪ್ರದರ್ಶಿಸುವುದು ನನ್ನ ಉದ್ದೇಶವಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಆಟ ನೋಡಿ, ಅಂತೆಯೇ ಒಂದು ಪುಟ್ಟ ಚಿತ್ರಣವನ್ನು ತತ್‌ಕ್ಷಣವೇ ಓದುಗರಿಗೆ ಒದಗಿಸುವುದಷ್ಟೇ ನನ್ನ ಉದ್ದೇಶ. ಬೆಳಗಿನ ಜಾವದ ಆಟದ ಬಗ್ಗೆ ನನ್ನಿಂದ ದಿಢೀರ್ ಕಿರುಚಿತ್ರಣ ಪಡೆಯುವ ಕನ್ನಡ ಓದುಗರ ಪೈಕಿ ವಿಶೇಷ ಆಸಕ್ತಿಯುಳ್ಳವರು ನನ್ನ ಬರಹದ ಮರುದಿನದ ಕನ್ನಡ ಪತ್ರಿಕೆಗಳಲ್ಲಿ ಅದೇ ಅಟದ ಬಗ್ಗೆ ಆಳವಾಗಿ ಮತ್ತು ವಿವರವಾಗಿ ಹೇಗೂ ಓದುತ್ತಾರಷ್ಟೆ.











Click it and Unblock the Notifications