ಫೀಫಾ : ಇದುವರೆಗಿನ ಪಂದ್ಯಗಳ ಸಮೀಕ್ಷೆ

ಪ್ರಬಲ-ದುರ್ಬಲ ತಂಡಗಳ ನಡುವೆ ಈ ಸಲ ನಡೆಯುತ್ತಿರುವ ಸಮಬಲದ ಹೋರಾಟಕ್ಕೆ ಪ್ರಮುಖ ಕಾರಣ ದುರ್ಬಲ ತಂಡಗಳು ರೂಪಿಸಿಕೊಂಡಿರುವ ಆಕ್ರಮಣಕಾರಿ ಆಟ. ಆಕ್ರಮಣದ ಜೊತೆಗೆ ಹೊಂದಾಣಿಕೆ ಮತ್ತು ತಂತ್ರಗಾರಿಕೆಯೂ ಇದ್ದರೆ ಗೆಲುವು ಸುಲಭಸಾಧ್ಯ ಎಂಬುದಕ್ಕೆ 47ನೇ (ವಿಶ್ವ)ಶ್ರೇಯಾಂಕಿತ ದಕ್ಷಿಣ ಕೊರಿಯಾವು 13ನೇ (ವಿಶ್ವ)ಶ್ರೇಯಾಂಕದ ಗ್ರೀಸನ್ನು 2-0 ಗೋಲುಗಳಿಂದ ಸೋಲಿಸಿದ್ದೇ ಸಾಕ್ಷಿ.
ಆದರೆ, ಶಿಸ್ತುಬದ್ಧತೆ, ಕಲಾತ್ಮಕತೆ, ಲೆಕ್ಕಾಚಾರ ಹಾಗೂ ನೈಪುಣ್ಯ ಇವುಗಳ ಸಹಿತ ತಂಡವು ಹೊಂದಾಣಿಕೆಯಿಂದ ಆಟವಾಡಿದರೆ ಅಂತಹ ತಂಡಕ್ಕೆ ಭರ್ಜರಿ ಜಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಆಸ್ಟ್ರೇಲಿಯಾ ವಿರುದ್ಧ ಜರ್ಮನಿ ಗಳಿಸಿದ 4-0 ಗೋಲುಗಳ ಗೆಲುವು ಉತ್ತಮ ನಿದರ್ಶನ.
ಮುಂದಿನ ದಿನಗಳಲ್ಲಿ ಯಾವ ಗುಣಗಳು ಮೇಲುಗೈ ಪಡೆಯುತ್ತವೆಂಬುದನ್ನು ನೋಡೋಣ.











Click it and Unblock the Notifications