ದುಷ್ಟ ದಾವೂದ್ ಕರಾಚಿಯಲ್ಲೇ ಇದ್ದಾನೆ!

ದಾವೂದ್ ಪುತ್ರಿ ಮಹ್ರೂಖ್ ಇಬ್ರಾಹಿಂ ಇತ್ತೀಚೆಗೆ ತನ್ನ ಫೇಸ್ ಬುಕ್ ಪ್ರೊಫೈಲ್‌ನಲ್ಲಿ ತನ್ನ ತಂದೆಯ ನೆಲೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಅಮ್ಮ, ಅಪ್ಪ, ಜುನೈದ್, ರೀಂಜ್, ಮೆಯೀನ್ ಮತ್ತು ಮಾಜಿಯಾ ಸೇರಿದಂತೆ ಕರಾಚಿಯಲ್ಲಿನ ಪ್ರತಿಯೊಬ್ಬರನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಆಕೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹೇಳಿದ್ದಾಳೆ.
ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಪುತ್ರ ಜುನೈದ್‌ನನ್ನು ಮದುವೆಯಾಗಿರುವ ಮಹ್ರೂಖ್ ಲಾಹೋರ್‌ನಲ್ಲಿ ನೆಲೆಸಿದ್ದಾಳೆ. ತಾನು ಕರಾಚಿಯಲ್ಲಿನ ಕ್ಲಿಫ್ಟಾನ್‌ನಲ್ಲಿ ಶಾಲೆಗೆ ಹೋಗಿದ್ದೆ ಎಂದೂ ಆಕೆ ಹೇಳಿಕೊಂಡಿದ್ದಾಳೆ.
ಭಾರತೀಯ ತನಿಖಾ ದಳಗಳು ಕೂಡ ದಾವೂದ್ ಕರಾಚಿಯಲ್ಲಿನ ಕ್ಲಿಫ್ಟಾನ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಈಗ ನಿಜವಾಗಿದೆ. ಭಾರತ ದಾವೂದ್ ನೆಲೆಯ ಬಗ್ಗೆ ಪಾಕ್ ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು.












Click it and Unblock the Notifications