ಹೆಣ್ಣು ಹುಲಿ ಮರಣ; ಖೇಣಿ ಹುಲಿ ದತ್ತು

ಸ್ಥಿತಿವಂತ ಖೇಣಿ ಉತ್ತಮ ಕೆಲಸ: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ಬನ್ನೇರುಘಟ್ಟ ಜೈವಿಕ ಉದ್ಯಾನದ ಎರಡು ಹುಲಿಗಳನ್ನುಆಜೀವ ಪರ್ಯಂತ ದತ್ತು ಪಡೆದಿದ್ದಾರೆ. ಉದ್ಯಾನಕ್ಕೆ ಪುತ್ರ ನಿಖಿಲ್‌ನ ಜತೆ ಶನಿವಾರ ಭೇಟಿ ನೀಡಿ ಎರಡು ಹುಲಿಗಳನ್ನು ದತ್ತು ಸ್ವೀಕರಿಸಿದ್ದರು.
ತಮ್ಮ ಕುಟುಂಬಕ್ಕೆ ಹುಲಿ ಪ್ರಿಯವಾದ ಪ್ರಾಣಿ ಎಂದ ಖೇಣಿ, ಮೂರು ವರ್ಷದ ಬಿಳಿ ಹುಲಿ ಹಾಗೂ ರಾಯಲ್ ಬೆಂಗಾಲ್ ಗಂಡು ಹುಲಿಗಳನ್ನು ದತ್ತು ಪಡೆದು , ದಾಖೆಲೆ ಪತ್ರಗಳಿಗೆ ಸಹಿ ಹಾಕಿದರು. ದತ್ತು ಪಡೆದ ಮರಿಗಳಿಗೆ ಅವರ ಮಕ್ಕಳಾದ ನಿಕಿಲ್ ಹಾಗೂ ಬಾಬಿ ಹೆಸರನ್ನೇ ಇಟ್ಟು ಖೇಣಿ ನಾಮಕರಣ ಮಾಡಿದರು.
ಹುಲಿಯೊಂದಕ್ಕೆ ವಾರ್ಷಿಕ 1.45 ಲಕ್ಷ ರು. ವೆಚ್ಚವಾಗಲಿದ್ದು, ಅವು ಬದುಕಿರುವಷ್ಟು ಕಾಲ ನಿರಂತರವಾಗಿ ಆ ವೆಚ್ಚವನ್ನು ಭರಿಸಲಾಗುವುದು. ಇದಕ್ಕಾಗಿ ವಾರ್ಷಿಕ 2.90ಲಕ್ಷ ರು. ಬಡ್ಡಿ ಬರುವಂತೆ ಬ್ಯಾಂಕಿನಲ್ಲಿ ಹುಲಿಗಳ ಹೆಸರಲ್ಲಿ ಮೂಲ ಧನವನ್ನು ಠೇವಣಿ ಇಡಲಾಗುವುದು ಎಂದರು.












Click it and Unblock the Notifications