ಸ್ಲಂಗಳಿಗೆ ಮಲೇಷಿಯಾ ತಂತ್ರಜ್ಞಾನ ಮನೆ: ಕಟ್ಟಾ
ಬೆಂಗಳೂರು,
ಜೂನ್ 11: ಬೆಂಗಳೂರು ನಗರದ 58 ಕೊಳಚೆ ಪ್ರದೇಶಗಳಲ್ಲಿ ಬಡಜನರಿಗಾಗಿ ಮೂಲಭೂತ ಸೌಕರ್ಯವುಳ್ಳ 18,000 ಮನೆಗಳನ್ನು 522 ಕೋಟಿ ರು. ವೆಚ್ಚದಲ್ಲಿ ಮಲೇಷಿಯಾ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವುದು ಎಂದು ಅಬಕಾರಿ ವಾರ್ತಾ ಮತ್ತು ಐಟಿ ಬಿಟಿ ಸಚಿವರಾದ ಕಟ್ಟಾಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು. id="toptextpromo">18
ಸಾವಿರ ಮನೆಗಳಲ್ಲಿ 8920 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು ಇನ್ನುಳಿದ ಎಲ್ಲಾ ಕಾಮಗಾರಿಗಳು ಮಾರ್ಚ್ 2011 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಮನೆಗಳು ಒಂದು ಹಾಲ್ , ಬೆಡ್ ರೂಂ, ಅಡುಗೆ ಮನೆ ಸ್ನಾನದ ಮನೆ ಹಾಗೂ ಶೌಚಾಲಯವನ್ನು ಒಳಗೊಂಡಿರುತ್ತವೆ. id='are-slot-1' class='oiad oi-axt oiadv'> id='top-searched-articles'>ಮಲೇಶಿಯಾ
ತಂತ್ರಜ್ಞಾನ ಬಳಕೆ: ಮಲೇಶಿಯಾ ದೇಶದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಮನೆ ನಿರ್ಮಾಣ ಮಾಡಿರುವುದು ದೇಶದಲ್ಲಿಯೇ ಪ್ರಥಮ.ಇದು ಕರ್ನಾಟಕ ಸರ್ಕಾರದ ಹೆಗ್ಗಳಿಕೆ. ಈ ತಂತ್ರಜ್ಞಾನದಲ್ಲಿ ಇಟ್ಟಿಗೆ ಜಿಲ್ಲಿ ಬಳಸದೆ, ಸಿಮೆಂಟ್, ಮರಳು ಹಾಗೂ ಫೋಮ್ ಬಳಸಿ 12 ದಿನಗಳ ಅವಧಿಯಲ್ಲಿ ಒಂದು ಮನೆಯನ್ನು ನಿರ್ಮಿಸಲಾಗುವುದೆಂದು ವಿವರಿಸಿದರು.











Click it and Unblock the Notifications