ಅಂಬಾನಿ ಸೋದರರಲ್ಲಿ ಉಕ್ಕುತ್ತಿದೆ ವಾತ್ಸಲ್ಯ

ಕಳೆದ ಜೂನ್ 2008ರಲ್ಲಿ ಮುಖೇಶ್ ಅಂಬಾನಿ ಅವರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಅನಿಲ್ ಬಾಂಬೆ ಹೈ ಕೋರ್ಟಿನಲ್ಲಿ 10,000 ಕೋಟಿ ರೂಪಾಯಿಗಳ ಮೊಕದ್ದಮೆ ಹೂಡಿದ್ದು ಇದರಲ್ಲಿ ಸಂದರ್ಶನವನ್ನು ಪುನಃ ಪ್ರಕಟಿಸಿದ ಎರಡು ಪತ್ರಿಕೆಗಳನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಎರಡು ವಾರಗಳ ಹಿಂದೆ ಅಂಬಾನಿ ಸಹೋದರರು ಅನಿಲ ಆದಾರಿತ ವಿದ್ಯುತ್ ಕ್ಷೇತ್ರ ಹೊರತು ಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವ ಒಪ್ಪಂದ ಮಾಡಿಕೊಂಡಿದ್ದರು. 2005ರ ಜೂನ್ ನಲ್ಲಿ ಇಬ್ಬರೂ ಸಹೋದರರು ವಿಭಜನೆಯಾಗಿದ್ದು, ನಂತರ ಅನಿಲ್ ರ ಆರ್ ಎನ್ ಅರ್ ಎಲ್ ಮತ್ತು ಮುಖೇಶ್ ರ ರಿಲಯನ್ಸ್ ಇಂಡಸ್ಟ್ರೀಸ್ ನಡುವೆ ಅನಿಲ ದರ ಕುರಿತು ಕಾನೂನು ಸಮರ ನಡೆದಿತ್ತು.
ಕಳೆದ ಮೇ 7 ರಂದು ಸುಪ್ರೀಂ ಕೋರ್ಟು ತೀರ್ಪು ನೀಡಿ ಇಬ್ಬರೂ ಸಹೋದರರು ಸರ್ಕಾರದ ಮದ್ಯಸ್ಥಿಕೆಯಲ್ಲಿ ಮತ್ತು ನಿಗದಿಪಡಿಸಿದ ದರದಂತೆ ಅನಿಲವನ್ನು ಮಾರಾಟ ಮತ್ತು ಖರೀದಿ ಮಾಡಬೇಕೆಂದು ಆದೇಶನೀಡಿತ್ತು.











Click it and Unblock the Notifications