ಧಾಬೋಲ್-ಬಿಡದಿ ಅನಿಲ ಕೊಳವೆ ಮಾರ್ಗ

ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಹಿರಿಯ ಅಧಿಕಾರಿ ಪ್ರಭಾತ್ ಸಿಂಗ್ ಅವರು ನಿರ್ಮಾಣಕ್ಕಾಗಿ ಕಂಪನಿ ಬೆಂಗಳೂರಿನಲ್ಲಿ ಕಚೇರಿಯನ್ನು ತೆರೆದಿದ್ದು 60 ನೌಕರರನ್ನು ನೇಮಕ ಮಾಡಿಕೊಂಡಿದೆ. ಧಾಬೋಲ್-ಬಿಡದಿ ಕೊಳವೆ ಮಾರ್ಗ ಹಾದು ಹೋಗುವ ಹತ್ತು ಕಡೆಗಳಲ್ಲಿ ಕೆಲಸ ಆರಂಭವಾಗಲಿದ್ದು 2012ರವೇಳೆಗೆ ಸಿದ್ಧವಾಗಲಿದೆ. ಈ ಕೆಲಸದ ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಯೋಜನೆಯ ಒಟ್ಟು ವೆಚ್ಚ 5,000 ಕೋಟಿ ರುಪಾಯಿಗಳಾಗಲಿವೆ ಎಂದೂ ಅವರು ಹೇಳಿದ್ದಾರೆ.
ದೃವೀಕೃತ ನೈಸರ್ಗಿಕ ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಉನ್ನತ ಒತ್ತಡದ ಕೊಳವೆ ಮಾರ್ಗದ ಮೂಲಕ ವಿವಿಧ ಪ್ರದೇಶಗಳಿಗೆ ಸಾಗಾಟ ಮಾಡಲಾಗುವುದು. ಈ ಯೋಜನೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ದಿ ನಿಗಮ ನೋಡಲ್ ಏಜೆನ್ಸಿಯಾಗಲಿದ್ದು ಈ ಕೊಳವೆ ಮಾರ್ಗದಿಂದ ವಿವಿಧ ನಗರಗಳ ಅನಿಲ ಪೂರೈಕೆ ಯೋಜನೆಗಳಿಗೆ ಅನಿಲ ಒದಗಿಸಲಾಗುತ್ತದೆ.
ಈ ಕೊಳವೆ ಮಾರ್ಗದಿಂದ ಕೃಷ್ಣ ಗೋದಾವರಿ ನಿಕ್ಷೇಪದ ಅನಿಲವನ್ನೂ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸಬಹುದಾಗಿದೆ. ಗೇಲ್ ಕಂಪನಿಯು ದೇಶದಲ್ಲಿ ಒಟ್ಟು 7,000 ಕಿಲೋ ಮೀಟರ್ ಉದ್ದದ ಅನಿಲ ಕೊಳವೆ ಮಾರ್ಗವನ್ನು ನಿರ್ವಹಣೆ ಮಾಡುತಿದ್ದು ಇನ್ನೂ 6 ಬಿಲಿಯನ್ ಡಾಲರ್ ಹೂಡಿಕೆ ಮೂಲಕ 5,000 ಕಿಲೋಮೀಟರ್ ಹೆಚ್ಚುವರಿ ಕೊಳವೆ ಮಾರ್ಗವನ್ನು ಅಳವಡಿಸಲು ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಅರ್ಧ ಅಂದರೆ 2500 ಕಿಲೋಮೀಟರ್ ಕೊಳವೆ ಮಾರ್ಗವನ್ನು ಕರ್ನಾಟಕದಲ್ಲೆ ನಿರ್ಮಿಸಲಾಗುತ್ತದೆ.












Click it and Unblock the Notifications