ಲೈಂಗಿಕ ಕಿರುಕುಳ : ಈ ಬಾರಿ ಸೇನಾಧಿಕಾರಿ ಪಾಳಿ
ನವದೆಹಲಿ,
ಜೂ.3 : ಕಿರಿಯ ಅಧಿಕಾರಿಯ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಕಾರಣ ಲೆಫ್ಟಿನೆಂಟ್ ಜನರಲ್ ನಂದ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿದೇಶ ಪ್ರವಾಸದ ವೇಳೆಯಲ್ಲಿ ನಂದ ಅವರು ತಮ್ಮ ಸಹೋದ್ಯೋಗಿ ಅಧಿಕಾರಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪಿಸಲಾಗಿತ್ತು. id="toptextpromo">ಲೆ.ಜ.ನಂದ
ಅವರ ತಾಂತ್ರಿಕ ಕಾರ್ಯದರ್ಶಿಯ ಪತ್ನಿ ಅವರ ಮೇಲೆ ಲೈಂಗಿಕ ಹಲ್ಲೆ ನಡೆಸಿರುವ ಬಗ್ಗೆ, ಸೇನಾ ಅಧಿಕಾರಿಗಳ ಪತ್ನಿಯರ ಸಂಘಕ್ಕೆ ದೂರುಗಳು ಬಂದಿದ್ದವು. ಸಂಘದ ಮುಖ್ಯಸ್ಥೆ ಭಾರತಿ ಸಿಂಗ್ ಅವರು ಭಾರತೀಯ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರಿಗೆ ದೂರುಗಳ ಪಟ್ಟಿಯನ್ನು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ, ನಂದ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಿ, ರಾಜೀನಾಮೆ ನೀಡಲು ಸೂಚನೆ ನೀಡಲಾಗಿತ್ತು. id='are-slot-1' class='oiad oi-axt oiadv'> id='top-searched-articles'>59
ವರ್ಷದ ಲೆ.ಜ.ನಂದ ಹಾಗೂ ಅವರ ಕಚೇರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ನಂದ ಹಾಗೂ ಅವರ ತಂಡ ಕಳೆದ ತಿಂಗಳು ಇಸ್ರೇಲ್ ಪ್ರವಾಸಕ್ಕೆ ಹೋಗಿತ್ತು. ಆಗ ಹಿರಿಯ ಅಧಿಕಾರಿ ನಂದ ತಮ್ಮ ಕಿರಿಯ ಅಧಿಕಾರಿಯ ಪತ್ನಿಯನ್ನು ಕಾಮುಕ ದೃಷ್ಟಿಯಿಂದ ನೋಡಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಭಟಿಂಡಾದ ಮೇಜರ್ ಜನರಲ್ ಎಕೆ ಲಾಲ್ ಅವರ ಮೇಲೆ ಹೊರಿಸಲಾಗಿದ್ದ ಲೈಂಗಿಕ ಕಿರುಕುಳದ ಆರೋಪ ಸಾಬೀತಾಗಿತ್ತು.











Click it and Unblock the Notifications