ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
ದುಬೈ,
ಜೂ.2: ಬ್ರಿಟೀಷ್ ಏರ್ ವೇಸ್ ಗೆ ಸೇರಿದ ಗಗನಸಖಿಯೊಬ್ಬರನ್ನು ಮರಳುಗಾಡಿಗೆ ಕರೆದೊಯ್ದು ಬಳಿಕ ಅತ್ಯಾಚಾರವೆಸಗಿದ ದಾರುಣ ಘಟನೆ ದುಬೈನಲ್ಲಿ ನಡೆದಿದೆ. 25 ವರ್ಷದ ಗಗನಸಖಿಯೊಬ್ಬರು ತಮ್ಮ ಸಹೋದರಿಯನ್ನು ನೈಟ್ ಕ್ಲಬ್ಬಿನಲ್ಲಿ ಬಿಟ್ಟು ಟ್ಯಾಕ್ಸಿಗಾಗಿ ಕಾಯುತ್ತಿದ್ದರು. id="toptextpromo">ಜೋರ್ಡಾನ್
ನ ಸೇಲ್ಸ್ ಮೆನ್ ಮೊಹಮ್ಮದ್ ಸಲೀಂ ಎಂಬಾತ ಆಕೆಗೆ ಡ್ರಾಪ್ ನೀಡುವುದಾಗಿ ತಮ್ಮಕಾರಿನಲ್ಲಿ ಕರೆದೊಯ್ದಿದ್ದಾನೆ. ಕಾರು ನಿಲ್ಲಿಸುವಂತೆ ಎಷ್ಟು ಗೋಗರೆದರೂ ಸಲೀಂ ಕಾರನ್ನು ನಿಲ್ಲಿಸದೆ ಮರುಭೂಮಿ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ. ಬಳಿಕ ಕಾರಿನ ಹಿಂಬದಿ ಸೀಟಿನಲ್ಲಿ ಆಕೆಯ ಮೇಲೆರಗಿ ಅತ್ಯಾಚಾರವೆಸಗಿದ್ದಾನೆ ಎಂದು ಗಗನಸಖಿ ಆರೋಪಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಸಲೀಂ ನ್ಯಾಯಾಲಯದಲ್ಲಿ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಒಂದು ತಿಂಗಳ ಬಳಿಕ ಮತ್ತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದು 'ದಿ ಸನ್' ಪತ್ರಿಕೆ ವರದಿ ಮಾಡಿದೆ. "ಅತ್ಯಾಚಾರವೆಸಗುವ ಸಮಯದಲ್ಲಿ ಆತನ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಹೆಣಗಾಟದಲ್ಲಿ ಕಾರಿನ ಕಿಟಕಿ ಗಾಜುಗಳು ನುಚ್ಚುನೂರಾದವು " ಎಂದು ಗಗನಸಖಿ ವಿವರ ನೀಡಿದ್ದಾರೆ.











Click it and Unblock the Notifications