ಅಲ್ಲಾ ಆಯ್ತು; ಈಗ ಆಸ್ಪತ್ರೆ ಮೇಲೆ ಉಗ್ರರ ದಾಳಿ

Midnight attack in Lahore
ಲಾಹೋರ್, ಜೂ.1: ಉಗ್ರವಾದಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸಗೈದಿದ್ದಾರೆ. ಲಾಹೋರ್ ನ ಜಿನ್ನಾ ಆಸ್ಪತ್ರೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ 12 ಮಂದು ಸಾವಪ್ಪಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕಳೆದ ವಾರ ಮಸೀದಿ ಮೇಲೆ ದಾಳಿ ಮಾಡಿದ ಉಗ್ರವಾದಿಗಳಲ್ಲಿ ಕೆಲವರು ಪೊಲೀಸರಿಗೆ ಸೆರೆಸಿಕ್ಕಿದ್ದರು. ಅವರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಮೀರ್ ಮೌವಿಯಾ ಎಂಬ ಉಗ್ರನನ್ನು ಚಿಕಿತ್ಸೆಗಾಗಿ ಲಾಹೋರ್ ನ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಿನ್ನಾ ಆಸ್ಪತ್ರೆಯಲ್ಲಿ ಕಿತ್ಸೆ ಪಡೆಯುತ್ತಿರುವ ಅಮೀರನನ್ನು ಬಿಡಿಸಿಕೊಳ್ಳಲು ಉಗ್ರರು ಮಧ್ಯರಾತ್ರಿಯ ಬಳಿಕ ದಾಳಿ ಮಾಡಿದ್ದಾರೆ. ಪೊಲೀಸು ಸಮವಸ್ತ್ರದಲ್ಲಿದ್ದ ನಾಲ್ಕು ಮಂದಿ ಉಗ್ರರು ಆಸ್ಪತ್ರೆಗೆ ನುಗ್ಗಿ ಮನಬಂದಂತೆ ಗುಂಡಿನ ಮಳೆಗರೆದು ತೀವ್ರ ನಿಗಾ ಘಟಕದಲ್ಲಿದ್ದ ತಮ್ಮ ಸಹಚರನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರು.

ಆದರೆ ಅಲ್ಲಿಯೇ ಇದ್ದ ಪೊಲೀಸರು ಉಗ್ರರ ಪ್ರವೇಶವನ್ನು ತಡೆಯುವಲ್ಲಿ ಯಶಸ್ವಿಯಾದರು. ಪರಸ್ಪರ ಗುಂಡಿನ ಚಕಮಕಿಯ ಬಳಿಕ ಉಗ್ರರು ಒಳಗೆ ನುಸುಳಲು ಸಾಧ್ಯವಾಗದೆ ವೈದ್ಯರನ್ನು ಹಿಡಿದು ರಕ್ಷಣಾ ಕವಚ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಮೇಲ್ಭಾಗಕ್ಕೆ ಹೋಗಿ ಅಲ್ಲಿಂದ ಕೆಳಗೆ ಇಳಿದು ಪೊಲೀಸರ ವ್ಯಾನಿನಲ್ಲಿ ಪರಾರಿಯಾಗಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+