ಕಾಮುಕ ತಂದೆಯಿಂದ ಮಕ್ಕಳಿಬ್ಬರ ಮೇಲೆ ಅತ್ಯಾಚಾರ
ಬೆಂಗಳೂರು,
ಮೇ .29 : ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತ ಹೇಯ ಘಟನೆ ದೇಶದ 'ಐಟಿ ಹಬ್' ಬೆಂಗಳೂರಿನ ದೇವರಜೀವನಹಳ್ಳಿ ಪೋಲಿಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ. ಹೆತ್ತ ತಂದೆಯೇ ತನ್ನ ಇಬ್ಬರ ಮಕ್ಕಳ ಮೇಲೆ ಎರಡು ತಿಂಗಳಿನಿಂದ ಅತ್ಯಾಚಾರ ಎಸಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. id="toptextpromo">ದೇವರಜೀವನಹಳ್ಳಿಯ
ಕೊಳಗೇರಿ ನಿವಾಸಿ ಅಬು ಫಯಾಜ್ ಎನ್ನುವಾತ 13 ವರ್ಷಗಳ ಹಿಂದೆ ಅಗ್ಸರ್ ಎಂಬಾಕೆಯನ್ನು ಮದುವೆಯಾಗಿದ್ದ. ವೃತ್ತಿಯಲ್ಲಿ ಅಡುಗೆ ಕೆಲಸದವನಾಗಿದ್ದ ಈತ ಇನ್ನೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಪತ್ನಿಯನ್ನು ಬಿಟ್ಟು ಟ್ಯಾನರಿ ರಸ್ತೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಎರಡು ತಿಂಗಳ ಹಿಂದೆ ಬಂದ ಈ ಕಾಮುಕ 12 ಮತ್ತು 11 ವರ್ಷದತನ್ನ ಇಬ್ಬರು ಮಕ್ಕಳನ್ನು ಕರೆದೊಯ್ದು ಅತ್ಯಾಚಾರ ಎಸಗಿದ. id='are-slot-1' class='oiad oi-axt oiadv'> id='top-searched-articles'>ಗುರುವಾರ
(ಮೇ .27) ರಾತ್ರಿ ಆತನಿಂದ ತಪ್ಪಿಸಿಕೊಂಡು ಬಂದ ಮಗಳು ತನ್ನ ತಾಯಿ ಬಳಿ ಎಲ್ಲಾ ವಿಷಯ ತಿಳಿಸಿದಳು. ಸಾರ್ವಜನಿಕರ ಸಹಾಯದೊಂದಿಗೆ ಬಂದ ತಾಯಿ ಮತ್ತೊಂದು ಮಗಳನ್ನು ರಕ್ಷಿಸಿದ್ದಾಳೆ. ಈ ಹೆಣ್ಣು ಮಕ್ಕಳ ಕಣ್ಣೀರಿನ ಕಥೆ ಕೇಳಿದ ಸಾರ್ವಜನಿಕರು ಕಾಮುಕ ಫಯಾಜ್ ಅನ್ನು ಹಿಗ್ಗಾಮುಗ್ಗ ಥಳಿಸಿ , ತಲೆ ಬೋಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.











Click it and Unblock the Notifications