ಮೆಲ್ಬೋರ್ನಲ್ಲಿ ಕಾಮುಕ ವೈದ್ಯನ ಬಂಧನ

Doctor arrested in Melbourne for misbehaviour
ಮೆಲ್ಬೋರ್ನ್, ಮೇ 28 : ವೈದ್ಯೋ ನಾರಾಯಣೋ ಹರಿಃ. ಜೀವವನ್ನು ಕೈಯಲ್ಲಿ ಹಿಡಿದು ಚಿಕಿತ್ಸೆಗೆಂದು ಬಂದ ರೋಗಿ ವೈದ್ಯರನ್ನು ದೇವರಂತೆ ಕಾಣಬೇಕು. ವೈದ್ಯ ಕೂಡ ರೋಗಿಗಳನ್ನು ತನ್ನ ಭಕ್ತರಂತೆ ಕಾಣಿ ಸಲಹಬೇಕು.

ಆದರೆ, ಇಂದೇನಾಗುತ್ತಿದೆ ನೋಡಿ. ರೋಗಿಯ ತಪಾಸಣೆ ನಡೆಸುವ ನೆಪದಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದು, ಅವಕಾಶಗಳ ದುರ್ಲಾಭ ಪಡೆಯುವುದು ಸಾಮಾನ್ಯವಾಗುತ್ತಿದೆ. ಇದೊಂದು ಜಾಗತಿಕ ವಿದ್ಯಮಾನವಾಗಿದೆ.

ನಾರಾಯಣನಂತೆ ವರ್ತಿಸದೆ ರಾಕ್ಷಸನಂತೆ ವರ್ತಿಸಿದ ಕಾಮುಕ ವೈದ್ಯನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯೋರ್ವಳನ್ನು ಬೆತ್ತಲು ಮಾಡಿ ಅಸಭ್ಯವಾಗಿ ವರ್ತಿಸಿದ ಚೀನಾ ಮೂಲದ ವೈದ್ಯನನ್ನು ಮೆಲ್ಬೋರ್ನ್ ನಲ್ಲಿ ಬಂಧಿಸಲಾಗಿದೆ.

ಅಕ್ಯುಪಂಕ್ಚರ್ ಮತ್ತು ಚೀನಾದ ಗಿಡಮೂಲಿಕೆ ಔಷಧಿಯಲ್ಲಿ ಪರಿಣಿತನಾಗಿರುವ ಡಾ. ಗ್ರಾಂಟ್ ವೂ ಎಂಬ ವೈದ್ಯನ ಪಟ್ಟಿಯಲ್ಲಿ 4 ಸಾವಿರಕ್ಕೂ ಹೆಚ್ಚಿನ ರೋಗಿಗಳಿದ್ದಾರೆ. ಕಳೆದ ಎಂಟು ವರ್ಷಗಳಿಂದ ವೈದ್ಯನಾಗಿ ವೃತ್ತಿಯಲ್ಲಿದ್ದಾನೆ. ಆದರೂ ವೈದ್ಯ ವೃತ್ತಿಗೆ ಕಪ್ಪುಚುಕ್ಕೆ ಇಡುವಂಥ ಕೆಲಸ ಮಾಡಿದ್ದಾನೆ.

ಚಿಕಿತ್ಸೆಗೆಂದು ಬಂದ ಮಹಿಳೆಯನ್ನು ಪೂರ್ತಿ ಬೆತ್ತಲೆ ಮಾಡಿದ ವೂ, ಅಕ್ಯುಪಂಕ್ಚರ್ ಮಾಡಬಾರದ ಜಾಗದಲ್ಲೆಲ್ಲ ಪಂಕ್ಚರ್ ಮಾಡಲು ಹೋಗಿದ್ದಾನೆ. ಹಾರ್ಮೋನ್ ಉತ್ತೇಜಿಸಬೇಕೆಂದು ಉತ್ತೇಜಿತನಾದ ವೂ ಮಹಿಳೆಯ ದೇಹದ ಎದೆಯ ಮೇಲೆಲ್ಲ ಕೈಯಾಡಿಸಿದ್ದಾನೆ.

ವೃತ್ತಿಪರತೆಯನ್ನು ಪಾಲಿಸದ ವೈದ್ಯನ ಲೈಸೆನ್ಸನ್ನು ಕ್ಯಾನ್ಸಲ್ ಮಾಡಲಾಗಿದೆ. ಈ ಜನ್ಮದಲ್ಲಿ ಮತ್ತೆ ಪ್ರಾಕ್ಟೀಸ್ ಮಾಡದ ಹಾಗೆ ನಿಷೇಧ ಹೇರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+