ನೆರೆ : ಸಾವಿರಾರು ಕೋ. ನುಂಗಿ ನೀರು ಕುಡಿದ ಸರಕಾರ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆ ಕಟ್ಟಿಸಿ ಕೊಡಲು ಮುಂದಾಗಿರುವ ಮಠ ಮಾನ್ಯಗಳಿಗೆ ಸಹಕಾರ ನೀಡಲು ಸರಕಾರ ಹಿಂದೆ ಬಿದ್ದಿದೆ. ಮಠಗಳು ನಿರ್ಮಿಸುತ್ತಿರುವ ಮನೆಗಳು ಪೂರ್ಣಗೊಳ್ಳುವುದು ಮತ್ತಷ್ಟು ವಿಳಂಬವಾಗುತ್ತಿದೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 210 ಮನ ಸಂಸ್ಥೆಗಳು ಸರಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದವು. ಮೂಲಗಳು ಪ್ರಕಾರ, ಸರಕಾರದ ಅಸಹಕಾರದಿಂದ 25 ಕ್ಕೂ ಹೆಚ್ಚು ಸಂಸ್ಥೆಗಳು ನಿರಾಸಕ್ತಿ ತೋರಿವೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿ, ಸಚಿವರನ್ನು ಹಾಗೂ ಅಧಿಕಾರಿಗಳು ಬಂದರೆ ಒದೆಯಿರಿ ಎಂದಿದ್ದು ಇದೇ ಕಾರಣಕ್ಕೆ. ಪ್ರವಾಹ ಉತ್ತರ ಕರ್ನಾಟಕದ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾದರು. ಆದರೆ, ಮುಖ್ಯಮಂತ್ರಿ ಮಾತ್ರ ನಾವು ಮನೆ ಕಟ್ಟಿಸುತ್ತೇವೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಎಲ್ಲಿವೆ ಮನೆಗಳು. ತಗಡಿನ ಶೆಡ್ಡಿನಲ್ಲಿ ಅಲ್ಲಿನ ಜೀವನ ಸಾಗಿಸಬೇಕಾಗಿದೆ. ಮುಂಗಾರು ಮಳೆ ಬೇರೆ ಆರಂಭವಾಯಿತು. ಅವರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ನೆರೆ ಸಂತ್ರಸ್ಥರಿಗೆ ಸಾವಿರಾರು ಕೋಟಿ ರುಪಾಯಿ ಸಂಗ್ರಹಿಸಿದ ಸರಕಾರ ಅದಕ್ಕೆ ಈವರೆಗೂ ಲೆಕ್ಕ ಕೊಟ್ಟಿಲ್ಲ. ಹಣ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಸ್ವಂತಃ ಮುಖ್ಯಮಂತ್ರಿಯವರಿಗೆ ಗೊತ್ತಿದೆಯೇ ಏನೂ ಗೊತ್ತಿಲ್ಲ. ಸಂತ್ರಸ್ಥ ಸ್ಥಿತಿ ಪಾಪ ಎನ್ನುವಂತಾಗಿದೆ.












Click it and Unblock the Notifications