ಅಲ್ಲಾನ ಮೇಲೆ ಮುಸ್ಲಿಂ ಉಗ್ರರ ದಾಳಿ
ಲಾಹೋರ್,
ಮೇ. 28 : ಪಾಕಿಸ್ತಾನದ ಮುಸ್ಲಿಮರಿಗೆ ಇಂದು ನಿಜಕ್ಕೂ ಕರಾಳ ಶುಕ್ರವಾರ. ಪಾಕಿಸ್ತಾನದ ಕೈಗಾರಿಕೆಗಳ ನಗರವಾಗಿರುವ ಲಾಹೋರ್ ನ ಗರ್ಹಿ ಸಾಹು ಮಸೀದಿಯೊಂದರ ಮೇಲೆ ದಾಳಿ ನಡೆಸಿರುವ ಉಗ್ರರು, ಮಸೀದಿಯಲ್ಲಿ ನಮಾಜು ಸಲ್ಲಿಸುತ್ತಿದ್ದ ಸುಮಾರು 2000 ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿರುವ ಭೀಕರ ಘಟನೆ ನಡೆದಿದೆ. ಒಬ್ಬ ಉಗ್ರ ಸಿಕ್ಕಿಬಿದ್ದಾನೆ ಎಂದು ಹೇಳಲಾಗಿದೆ. id="toptextpromo">ಉಗ್ರ
ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಕಾಳಗ ಆರಂಭವಾಗಿದ್ದು, ಉಗ್ರರು ಒತ್ತೆಯಾಳುಗಳನ್ನು ಒಬ್ಬರಂತೆ ಹತ್ಯೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಈ ವರೆಗೂ ಸಾವಿನ ಬಗ್ಗೆ ಖಚಿತ ಮಾಹಿತಿಗಳು ಬಂದಿಲ್ಲವಾದರೂ ಸಾವಿನ ಸಂಖ್ಯೆ ಪ್ರಮಾಣ ದೊಡ್ಡಗಾಗುವ ಸಂಭವವಿದೆ. id='are-slot-1' class='oiad oi-axt oiadv'> id='top-searched-articles'>ಘಟನೆ
ತಿಳಿಯುತ್ತಿದ್ದಂತೆಯೇ ಪಾಕ್ ಸರಕಾರ ಉಗ್ರರೊಂದಿಗೆ ಗುಂಡಿನ ಕಾಳಗ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆ ಭದ್ರತಾ ಪಡೆಯನ್ನು ರವಾನಿಸಲು ಸೂಚನೆ ನೀಡಿದೆ. ಆದರೆ, ದಾಳಿನಡೆಸಿರುವುದು ಯಾವ ಉಗ್ರ ಸಂಘಟನೆ ಎಂದು ತಿಳಿದು ಬಂದಿಲ್ಲ. ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications