400 ಕೆಜಿ ತೂಕದಎಟಿಎಂ ಪತ್ತೆ, 16 ಲಕ್ಷ ರು ಎಲ್ಲಿ?

Stolen HDFC Bank ATM found near Huskur
ಬೆಂಗಳೂರು, ಮೇ.27: ಆನೇಕಲ್ ನಲ್ಲಿ ಕಳುವಾಗಿದ್ದ ಎಚ್ ಡಿಎಫ್ ಸಿ ಬ್ಯಾಂಕಿನ 400 ಕೆಜಿ ತೂಕದ ಎಟಿಎಂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಹುಸ್ಕೂರು ಸಮೀಪದ ಚಿಕ್ಕನಾಗಮಂಗಲ ಕೆರೆಯ ಬಳಿ ಪತ್ತೆಯಾಗಿದೆ.

ಎಟಿಎಂ ಯಂತ್ರದ ಸ್ಥಿತಿ ಗತಿ: ಎಟಿಎಂನ ಮೂರು ಕಂಪಾರ್ಟ್ ಮೆಂಟ್ ತೆರೆದು ಹಣ ದೋಚಿದ್ದಾರೆ. ಇನ್ನೊಂದು ಭಾಗವನ್ನು ತೆರೆಯಲು ವಿಫಲ ಯತ್ನ ನಡೆಸಿ, ಸೋತು ಕಡೆಗೆ ಯಂತ್ರಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಯಂತ್ರವನ್ನು ತೆರೆಯಲು ಬಳಸಿರಬಹುದಾದ ಗ್ಯಾಸ್ ಕಟರ್ ಮತ್ತಿತ್ತರ ಸಲಕರಣೆಗಳು ಯಂತ್ರ ಪತ್ತೆಯಾದ ಸ್ಥಳದಲ್ಲೇ ಸಿಕ್ಕಿವೆ.

ಜಾಣ ಕಳ್ಳರು: ಎಟಿಎಂ ಕೇಂದ್ರ ಪರಿಸರವನ್ನು ಚೆನ್ನಾಗಿ ಅರಿತಿದ್ದ ಕಳ್ಳರು,ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸಿ ಬಂದಿದ್ದರು. ಆದರೂ, ಲಭ್ಯವಿರುವ ಚಿತ್ರದ ಆಧಾರದ ಮೇಲೆ ರೇಖಾಚಿತ್ರ ರಚಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಂತ್ರ ಸಿಕ್ತು ಆದ್ರೆ ಹಣ?: ದುಷ್ಕರ್ಮಿಗಳು ತೆರೆಯಲು ಆಗದೇ ಹಾಗೆ ಬಿಟ್ಟಿರುವ ಎಟಿಎಂ ಭಾಗವನ್ನು ತಂತ್ರಜ್ಞರು ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸೋಮವಾರ ಎಟಿಎಂ ಕಳುವಾದ ಮೇಲೆ ಬ್ಯಾಂಕ್ ಮ್ಯಾನೇಜರ್ ಕಾರ್ತಿಕೇಯನ್ ನೀಡಿದ್ದ ದೂರಿನ ಅನ್ವಯ ಎಟಿಎಂನಲ್ಲಿ ಸುಮಾರು 16 ಲಕ್ಷ ರು ಇತ್ತು ಎಂದು ತಿಳಿದು ಬಂದಿದೆ ಆದರೆ, ಸ್ಪಷ್ಟವಾಗಿ ಕಳುವಾಗಿರುವ ಹಣದ ಮೊತ್ತದ ಬಗ್ಗೆ ಈಗಲೇ ಹೇಳಲಾಗದು ಎಂದು ಬೆಂಗಳೂರು ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಎಂ.ಶಂಕರಪ್ಪ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+