ಮೇ 28ರಂದು ಸಿಬಿಎಸ್ಇ ಫಲಿತಾಂಶ

2010ನೇ ಸಾಲಿನ ಸಿಬಿಎಸ್ಇ ಕ್ಲಾಸ್ ಟೆನ್ ಪರೀಕ್ಷೆಗಳು ಕಳೆದ ಮಾರ್ಚ್ ನಲ್ಲಿ ನಡೆದಿತ್ತು. ದೇಶದಾದ್ಯಂತ ಸುಮಾರು 9.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದು ಕಾದೂ ಸುಸ್ತಾಗಿದ್ದಾರೆ.
ಫಲಿತಾಂಶ ನೀರೀಕ್ಷೆಯಲ್ಲಿರುವ ಭಾರತ ಮತ್ತು ವಿದೇಶಿ ವಿದ್ಯಾರ್ಥಿಗಳು ಈಗಲೇ cbseresults.nic.in ವೆಬ್ ಸೈಟಿಗೆ ಹೋಗಿ ತಮ್ಮ ಇಮೇಲ್ ಭರ್ತಿ ಮಾಡಿ ನೊಂದಾವಣೆ ಮಾಡಿಕೊಳ್ಳುವುದು ಒಳಿತು. ನಿಮ್ಮ ಫಲಿತಾಂಶಗಳು ನಿಮ್ಮ ಇಮೇಲ್ ಬುಟ್ಟಿಗೆ ಬಂದು ಬೀಳುತ್ತದೆ. ಮತ್ತೆ ಗುಡ್ ಲಕ್. ಫಲಿತಾಂಶಕ್ಕಾಗಿ ನೀವು ಈ ವೆಬ್ ಸೈಟನ್ನೂ ನೋಡಬಹುದು results.nic.in.
ಫಲಿತಾಂಶಗಳು ಬರದ ಹೊರತು ಕಾಲೇಜಿನ ಸೀಟು ಗ್ಯಾರಂಟಿ ಆಗುವುದಿಲ್ಲ. ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಅದೇ ಒಂದು ದೊಡ್ಡ ತಲೆನೋವು. ಈ ಬಾರಿಯ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಫಲಿತಾಂಶಗಳು ಪ್ರಕಟವಾಗಿ 20 ದಿನಗಳಾದವು. ಆ ವಿದ್ಯಾರ್ಥಿಗಳಿಗೆ ಈ ಸಲ ಅನಗತ್ಯ ಗೊಂದಲ ಉಂಟಾಗಿಲ್ಲ. ಆದರೆ ಸಿಬಿಎಸ್ಇ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಆತಂಕ ಮಾತ್ರ ಹೇಳತೀರದು. ಫಲಿತಾಂಶಕ್ಕೆ ಇನ್ನೂ ಮೂರು ದಿನ ಕಾಯಬೇಕಾ ಎನ್ನುವುದು ಅನೇಕರ ಮನಸ್ಸಿನ ಮಾತು.












Click it and Unblock the Notifications