ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್ ಮಾರಾಟದಲ್ಲಿ ಶೇ.33 ಹೆಚ್ಚಳ

By Mahesh
|
Google Oneindia Kannada News

PC sales rise 33 pc in Jan-March - IDC
ನವದೆಹಲಿ, ಮೇ.24: ದೇಶದಲ್ಲಿ ವೈಯಕ್ತಿಕ ಕಂಪ್ಯೂಟರ್ ಗಳ ಮಾರಾಟದಲ್ಲಿ ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಶೇ.33 ರಷ್ಟು ಏರಿಕೆ ದಾಖಲಾಗಿದೆ ಎಂದು ಸಂಶೋಧನಾ ಸಂಸ್ಥೆ ಐಡಿಸಿ ಹೇಳಿದೆ.

ಸಂಸ್ಥೆಯ ಪ್ರಕಾರ ಗ್ರಾಹಕ ವಿಸ್ವಾಸ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಗ್ರಾಹಕರ ವೆಚ್ಚ ಏರಿರುವುದರಿಂದ ಈ ಏರಿಕೆ ದಾಖಲಾಗಿದೆ. ಒಟ್ಟು ಕಂಪ್ಯೂಟರ್ ಗಳ ಮಾರಾಟದಲ್ಲಿ ಡೆಸ್ಕ್ ಟಾಪ್ ಕಂಪ್ಯೂಟರ್ ಗಳ ಮಾರಾಟ ಮೂರನೇ ಎರಡರಷ್ಟು ಪಾಲು ಹೊಂದಿದ್ದು, ಒಟ್ಟು 2.2 ಮಿಲಿಯ ಪಿಸಿಗಳು ಮಾರಾಟವಾಗಿವೆ.

ಲ್ಯಾಪ್ ಟಾಪ್ ಗಳ ಮಾರಾಟದಲ್ಲಿ ಶೇ.72ರಷ್ಟು ಏರಿಕೆ ದಾಖಲಾಗಿದ್ದು, 8,03,000 ಲ್ಯಾಪ್ ಟಾಪ್ ಗಳು ಮಾರಾಟವಾಗಿವೆ. ಗ್ರಾಹಕ ವಿಭಾಗದಲ್ಲಿ ಮೊದಲ ಮೂರು ತಿಂಗಳಿನಲ್ಲಿ ಪಿಸಿ ಗಳ ಮಾರಾಟದಲ್ಲಿ ಶೇ.42 ರಷ್ಟು ಏರಿಕೆ ದಾಖಲಾಗಿದ್ದು ವಾಣಿಜ್ಯ ಉದ್ದೇಶದ ಕಂಪ್ಯೂಟರ್ ಗಳ ಮಾರಾಟದಲ್ಲಿ ಶೇ.28 ಏರಿಕೆ ದಾಖಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಕಂಪ್ಯೂಟರ್ ಗಳ ಮಾರಾಟದಲ್ಲಿ ಶೇ.7.6ರಷ್ಟು ಏರಿಕೆ ದಾಖಲಾಗಿತ್ತು. ಅದರ ಹಿಂದಿನ ವರ್ಷ ಶೇ.8.1 ಕುಸಿತ ದಾಖಲಾಗಿತ್ತು. ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಹ್ಯೂಲೆಟ್ ಪ್ಯಾಕರ್ಡ್ ಶೇ.16.5 ಮಾರುಕಟ್ಟೆ ಪಾಲು ಹೊಂದಿದ್ದು, ಡೆಲ್ ಹಾಗೂ ಏಸರ್ ತಲಾ ಶೇ.13.6 ಹಾಗೂ ಶೇ.13ರಷ್ಟು ಪಾಲು ಹೊಂದಿವೆ ಎಂದು ಐಡಿಸಿ ಸಂಸ್ಥೆ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X