ಮೇ 22 ರಂದು ಸಿಇಟಿ ಫಲಿತಾಂಶ
ಬೆಂಗಳೂರು,
ಮೇ. 21 : ಇಂಜಿನಿಯರಿಂಗ್, ವೈದ್ಯ, ದಂತ ವೈದ್ಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ಈ ಬಾರಿಯ ಸಿಇಟಿ ಫಲಿತಾಂಶ ನಾಳೆ(ಶನಿವಾರ) ಪ್ರಕಟವಾಗಲಿದೆ. ಫಲಿತಾಂಶ ನೀಡಲು ರಾಜ್ಯ ಪರೀಕ್ಷಾ ಪ್ರಾಧಿಕಾರ ಸಿದ್ದತೆ ಮಾಡಿಕೊಂಡಿದೆ. id="toptextpromo">ವಿದ್ಯಾರ್ಥಿಗಳು
ವೆಬ್ ಸೈಟ್ ನಲ್ಲಿ http://cet.kar.nic.in/ ಫಲಿತಾಂಶ ನೋಡಬಹುದಾಗಿದೆ. ಈ ವರ್ಷ 1.15 ಲಕ್ಷ ವಿದ್ಯಾರ್ಥಿಗಳು ಸಿಇಟಿ ತೆಗೆದುಕೊಂಡಿದ್ದರು. ಏಪ್ರಿಲ್ 28ರಿಂದ 30ರವರೆಗೆ ಈ ಪರೀಕ್ಷೆ ನಡೆದಿತ್ತು. ಜೂನ್ 2 ರಿಂದ ಇಂಜಿನಿಯರಿಂಗ್, ವೈದ್ಯ, ದಂತ ವೈದ್ಯ ಕೋರ್ಸ್ ಗಳು ಸೀಟು ಆಯ್ಕೆಗೆ ಕೌನ್ಸೆಲಿಂಗ್ ಆರಂಭವಾಗಲಿದೆ. id='are-slot-1' class='oiad oi-axt oiadv'> id='top-searched-articles'>ಈಗಾಗಲೇ
ನಿಗದಿಯಾಗಿರುವಂತೆ ಜೂನ್ 2 ರಂದು ಕೌನ್ಸೆಲಿಂಗ್ ಆರಂಭವಾಗಲಿದೆ. ಜೂನ್ 2 ರಿಂದ 8ರ ವರೆಗೆ ಅಂಗವಿಕಲರು, ಎನ್ ಸಿಸಿ ಕ್ರೀಡಾ ಕೋಟಾದ ವಿದ್ಯಾರ್ಥಿಗಳಿಗೆ ಪ್ರವೇಶ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಜೂನ್ 10 ರಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ, 15 ರಿಂದ ಯುನಾನಿ, ಆಯುರ್ವೇದ, ಹೋಮಿಯೋಪತಿ, ಯೋಧ ಕೋರ್ಸ್ ಗಳಿಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಲಿಂಬಾವಳಿ ವಿವರಿಸಿದರು.











Click it and Unblock the Notifications