ಚೆನ್ನೈ,ಆಂಧ್ರ ಕರಾವಳಿಗೆ ಲೈಲಾ ಆರ್ಭಟದ ಭೀತಿ
ಚೆನ್ನೈ,
ಮೇ.19 : ಚೆನ್ನೈನ ಆಗ್ನೇಯಕ್ಕೆ ಸುಮಾರು 190 ಕಿ.ಮೀ. ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಲೈಲಾ ಚಂಡಮಾರುತವು ತೀಕ್ಷ್ಣಗೊಂಡಿದ್ದು, ಉತ್ತರ ತಮಿಳುನಾಡು,ಪುದುಚೇರಿ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಜೊತೆಗೆ ಬಲವಾದ ಗಾಳಿ ಬೀಸುವ ನಿರೀಕ್ಷೆ ಕಂಡು ಬಂದಿದೆ. id="toptextpromo">ಸದ್ಯದ
ಮಾಹಿತಿಯಂತೆ ಚಂಡಮಾರುತವು ಇನ್ನಷ್ಟು ತೀವ್ರಗೊಂಡು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಆಂಧ್ರಪ್ರದೇಶ ಕರಾವಳಿಯತ್ತ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಮಂಗಳವಾರ ಮುನ್ಸೂಚನೆಯಲ್ಲಿ ತಿಳಿಸಿದೆ. ಮಂಗಳವಾರ ರಾತ್ರಿಯಿಂದಲೇ ಆಂಧ್ರ ಪ್ರದೇಶ ಕರಾವಳಿಯುದ್ದಕ್ಕೂ ಮತ್ತು ಅದರಾಚೆಗೆ ಗಂಟೆಗೆ 65-75 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.ವಿಡಿಯೋ:
ಲೈಲಾ
ಚಂಡಮಾರುತದ
ಭೀತಿ
id='are-slot-1'
class='oiad
oi-axt
oiadv'>
id='top-searched-articles'>
ಸಮುದ್ರದ
ವಾತವರಣ ಅಹಿತಕರವಗಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಚಂಡಮಾರುತ ಪಥದ ಮೇಲೆ ತಜ್ಞರು ನಿರಂತರ ನಿಗಾಯಿರಿಸಿದ್ದಾರೆ.ಲೈಲಾ ಚಂಡಮಾರುತದ ಪರಿಣಾಮ ಮುಂಗಾರು ವಿಳಂಬವಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ವಿಜ್ಞಾನಿಗಳು ಸೂಚಿಸಿದ್ದಾರೆ. ಕರ್ನಾಟಕದಲ್ಲೂ ಇನ್ನೆರಡು ದಿನಗಳ ಕಾಲ ಮೋಡತುಂಬಿದ ವಾತಾವರಣ ಮುಂದುವರೆಯಲಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಸಂಭವವಿದೆ.











Click it and Unblock the Notifications