ಗುಜರಿ ಅಂಗಡಿಯಲ್ಲಿ ಚೆನ್ನೈ ಗುರು ಚಿನ್ನದ ಬೆಳೆ

ವಾಷಿಂಗ್ಟನ್, ಮೇ.19: ಚೆನ್ನೈ ನಿಂದ ಅಮೇರಿಕಾಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಲು ತೆರಳಿದ್ದ ರಾಮ್ ಗುರು (44) ಅದರಲ್ಲಿ ಸಫಲರಾಗಲಿಲ್ಲ. ಆದರೆ ಅಮೇರಿಕಾದಲ್ಲಿ ಅತೀ ಶೀಘ್ರವಾಗಿ ಬೆಳೆಯುಬಲ್ಲ ಕಂಪೆನಿಯೊಂದನ್ನು ಹುಟ್ಟು ಹಾಕುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ.

ರಾಮ್ ಗುರುವಿನ ಹಳೆ ಲೋಹದ ಗುಜರಿ ಸಾಮಾನುಗಳನ್ನು ಮಾರಾಟ ಮಾಡುವ ಮೈಲ್ ಸ್ಟೋನ್ ಮೆಟಲ್ಸ್ ಅಮೆರಿಕಾದಲ್ಲಿ ಅತೀ ಶೀಘ್ರವಾಗಿ ಬೆಳೆಯುತ್ತಿರುವ ಕಂಪೆನಿಗಳಲ್ಲೊಂದಾಗಿದ್ದು ಈ ವರ್ಷ 80 ಮಿಲಿಯನ್ ಡಾಲರ್ ಆದಾಯ ಗಳಿಸಲಿದೆ ಎಂದು ದ ವಾಷಿಂಗ್ಟನ್ ಪೋಸ್ಟ್ ಮಂಗಳವಾರ ವರದಿ ಮಾಡಿದೆ.

ವರದಿಯ ಪ್ರಕಾರ ರಾಮ್ ಗುರು ತಮ್ಮ ಭಾರತೀಯ ಸ್ನೇಹಿತನೊಬ್ಬನ ಹಳೆ ಲೋಹದ ವ್ಯಾಪಾರದಲ್ಲಿ ಸಹಾಯ ಮಾಡಲು ಇಳಿದರು. ನಂತರ ಅಲ್ಯುಮಿನಿಯಂನ್ನು ಅಮೇರಿಕಾದಿಂದ ಭಾರತಕ್ಕೆ ರಫ್ತು ಮಾಡುವ ವಹಿವಾಟನ್ನು ಕೈಗೊಂಡು 2003ರ ಜೂನ್ ನಲ್ಲಿ ಅವರೇ ಕಂಪೆನಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಬ್ರಿಕ್(BRIC) ದೇಶಗಳಾದ ಬ್ರೆಜಿಲ್ , ರಷ್ಯಾ, ಚೀನಾ ಮತ್ತು ಭಾರತದಲ್ಲಿ ಹೆದ್ದಾರಿ, ಮನೆ, ಕಚೇರಿ ಮತ್ತು ಮೂಲ ಸೌಕರ್ಯ ರಂಗದಲ್ಲಿ ಲೋಹದ ಬಳಕೆ ಹೆಚ್ಚಿದ್ದರಿಂದ ಉತ್ತಮ ವಹಿವಾಟು ಸಾಧ್ಯವಾಯಿತು ಎನ್ನಲಾಗಿದೆ.

ಏಕೈಕ ದೂರವಾಣಿ, ಏಕೈಕ ಕಂಪ್ಯೂಟರ್, ಏಕೈಕ ಕೊಠಡಿಯೊಂದಿಗೆ ಸ್ವಂತ ಕಂಪೆನಿ ಆರಂಭಿಸಿ ನಂತರ ಹಿಂತಿರುಗಿ ನೋಡಲೇ ಇಲ್ಲ. ಇಂಟರ್ ನೆಟ್ ಮೂಲಕ ಅಮೆರಿಕಾದ ನೂರಕ್ಕೂ ಅಧಿಕ ಗುಜರಿ ಮಾರಾಟ ಮಳಿಗೆಗಳಿಂದ ಲೋಹದ ಸರಕು ಪೇಟೆಯ ದರ ಆಧರಿಸಿ ಲೋಹ ಖರೀದಿಸುವ ಗುರು ಅದನ್ನು ನ್ಯೂಯಾರ್ಕ್, ಬೋಸ್ಟನ್, ಪೋರ್ಟ್ ಲ್ಯಾಂಡ್, ನ್ಯೂ ಒರ್ಲಿಯನ್ಸ್ ಬಂದರುಗಳ ಮೂಲಕ ಕಂಟೇನರ್ ಗಳಲ್ಲಿ ವಿಶ್ವದ ಮೂಲೆಗಳಿಗೆ ರಫ್ತು ಮಾಡುತ್ತಾರೆ.

ಅಮೆರಿಕಾದಿಂದ ಚೀನಾಕ್ಕೆ ಒಂದು ಕಂಟೇನರ್ ರಫ್ತು ಮಾಡಲು 1500 ರಿಂದ 2000 ಡಾಲರ್ ಬಾಡಿಗೆ ನೀಡಬೇಕಾಗುತ್ತದೆ ಎಂದು ಗುರು ಹೇಳುತ್ತಾರೆ. 2003ರಲ್ಲಿ ಒಂದು ಮಿಲಿಯನ್ ಡಾಲರ್, 2005ರಲ್ಲಿ 3ಮಿಲಿಯನ್, 2007ರಲ್ಲಿ 27ಮಿಲಿಯನ್, 2008ರಲ್ಲಿ 40ಮಿಲಿಯನ್, ಡಾಲರ್ ಆದಾಯ ಗಳಿಸಿರುವ ಗುರು ಈ ವರ್ಷ 80ಮಿಲಿಯ ಡಾಲರ್ ಆದಾಯ ಗಳಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+