ಶುಶ್ರೂಷಾ ತರಬೇತಿಗಾಗಿ ಅರ್ಜಿ ಆಹ್ವಾನ

ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ಪ್ರಾಂಶುಪಾಲರುಗಳಿಂದ ಕಚೇರಿ ವೇಳೆಯಲ್ಲಿ ಮಧ್ಯಾಹ್ನ 4ಯೊಳಗೆ ರೂ 100 (ಪಜಾ/ಪಪಂ ವರ್ಗ-1 ಕ್ಕೆ ರೂ 50/-) ಗಳನ್ನು ಡಿ.ಡಿ. ಮೂಲಕ ಸಂದಾಯ ಮಾಡಿ ನಿಗದಿತ ಅರ್ಜಿಯನ್ನು ಪಡೆಯಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ಅರ್ಜಿ ಪಡೆದ ಶುಶ್ರೂಷಾ ಶಾಲೆಗೆ ನೇರವಾಗಿ ಸಲ್ಲಿಸಬೇಕು.
ಅರ್ಜಿಯನ್ನು ಮೇ 15 ರಿಂದ ಜೂನ್ 3 ರವರೆಗೆ ವಿತರಿಸಲಾಗುವುದು. ಜೂನ್ 5 ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿರುತ್ತದೆ. ಅಂಚೆ ಮೂಲಕ ಅರ್ಜಿಯನ್ನು ಪಡೆಯಬಯಸುವವರು ಅರ್ಜಿ ಶುಲ್ಕ ರೂ 100 (ಪ.ಜ. ಪ.ಪಂ ವರ್ಗ-1 ಕ್ಕೆ ರೂ 50) ರಾಷ್ಟ್ರೀಕೃತ ಬ್ಯಾಂಕಿನಿಂದ ಡಿ.ಡಿ.ಯನ್ನು ವೈದ್ಯಕೀಯ ಅಧೀಕ್ಷಕರು/ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಇವರ ಹೆಸರಿನಲ್ಲಿ ಪಡೆದು ಸ್ವ ವಿಳಾಸವಿರುವ 30 x 12 ಲಕೋಟೆಗೆ ಅಂಚೆಚೀಟಿ ಹಚ್ಚಿ ಆಯ್ಕೆ ಬಯಸುವ ಸಂಸ್ಥೆಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆನಂದರಾವ್ ಸರ್ಕಲ್, ಬೆಂಗಳೂರು- 9 ಇವರ ಕಚೇರಿಯನ್ನಾಗಲೀ ಅಥವಾ ದೂರವಾಣಿ ಸಂಖ್ಯೆ 080-22870060 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.











Click it and Unblock the Notifications