ಮೇ.30ಕ್ಕೆ ಮುಂಗಾರು ಮಳೆ; ರೈತರ ಮೊಗದಲ್ಲಿ ಸಂತಸ
ನವದೆಹಲಿ,
ಮೇ.15: ಭಾರತದ ಶೇ.60ಕ್ಕೂ ಹೆಚ್ಚು ಮಂದಿ ರೈತರು ಕಾತುರದಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆಗಮಿಸುತ್ತದೆ. ಆದರೆ ಈ ಬಾರಿ ಮೇ.30ರಿಂದ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ರೈತರ ಬೇಸಾಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. id="toptextpromo">ಮೇ.30ರಿಂದ
ನೈರುತ್ಯ ಮುಂಗಾರು ಕೇರಳ ರಾಜ್ಯದಿಂದ ಆರಂಭವಾಗಲಿದೆ. ಕಳೆದ ವರ್ಷ ಮುಂಗಾರು ಮಳೆ ಮೇ.23ರಂದು ಆರಂಭವಾಗಿತ್ತು. ಹವಾಮಾನ ಇಲಾಖೆ ಮೇ.26ಕ್ಕೆ ಮುಂಗಾರು ಮಳೆ ಆರಂಭವಾಗುತ್ತದೆ ಎಂದು ಕಳೆದ ವರ್ಷ ತಿಳಿಸಿತ್ತು. ಈ ಬಾರಿಯ ಮುಂಗಾರು ಮಳೆ ಹೆಚ್ಚು ಕಡಿಮೆ ನಾಲ್ಕು ದಿನಗಳಲ್ಲಿ ಬರುವ ಸಾಧ್ಯತೆ ಇದೆ. id='are-slot-1' class='oiad oi-axt oiadv'> id='top-searched-articles'>ಜೂನ್
ಸೆಪ್ಟೆಂಬರ್ ವರೆಗೆ ಮುಂಗಾರು ಸಹಜ ಪ್ರಮಾಣದಲ್ಲಿರುತ್ತದೆ. ಭಾರತೀಯ ಹವಾಮಾನ ಇಲಾಖೆ 2005ರಿಂದ ಮುಂಗಾರು ಮುನ್ಸೂಚನೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಂಖ್ಯಾಶಾಸ್ತ್ರದ ಮಾದರಿಯನ್ನು ಬಳಸುತ್ತಿದೆ. ಈ ಮಾದರಿಯ ಮುನ್ಸೂಚನೆ ನಾಲ್ಕು ದಿನಗಳಷ್ಟು ಹೆಚ್ಚು ಕಡಿಮೆ ವ್ಯತ್ಯಾಸದಲ್ಲಿ ಖಚಿತವಾಗಿ ಸಂಭವಿಸುತ್ತದೆ.











Click it and Unblock the Notifications