ಸಬೀನಾ ಪಲ್ಲವಿಯಾದ್ಲು : ರಿವರ್ಸ್ ಲವ್ ಜಿಹಾದ್
ಸಕಲೇಶಪುರ,
ಮೇ. 12 : ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಹಾರಿಸಿಕೊಂಡು ಹೋಗಿ ನಿಖಾ ಮಾಡಿಕೊಳ್ಳುವುದು ಲವ್ ಜಿಹಾದ್. ಆದರೆ, ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಮದುವೆಯಾದರೆ ಏನನ್ನಬೇಕು ? ಗೊತ್ತಿಲ್ಲ, ಏನಾದರೂ ಅನ್ನಿ, ಮುಸ್ಲಿಂ ಯುವತಿಯೊಬ್ಬಳು ಕಳೆದ 12 ವರ್ಷದಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕನನ್ನು ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿರುವ ಘಟನೆ ಸೋಮವಾರ ನಡೆದಿದೆ. ಇದಕ್ಕೆ ಹಿಂದೂ ಸಂಘಟನೆ ಹಿಂದೂ ಶ್ರೀರಾಮಸೇನೆ ಪೌರಾಹಿತ್ಯ ವಹಿಸಿದ್ದು ವಿಶೇಷವಾಗಿತ್ತು. id="toptextpromo">ಪಟ್ಟಣದ
ಹೆಗ್ಗದೆಯ ಸಬೀನಾ ಮತ್ತು ಅದೇ ಗ್ರಾಮದ ಸುರೇಶ್ ಪರಸ್ಪರ 12 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಜಾತಿ ಅವರಿಬ್ಬರ ಪ್ರೇಮಕ್ಕೆ ವಿಲನ್ ಆಗಿ ಪರಿಣಮಿಸಿತ್ತು. ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ಮುಖಂಡತ್ವದಲ್ಲಿ ಪಟ್ಟಣದ ಪಂಚಮುಖಿ ಮಹಾಗಣಪತಿ ದೇವಸ್ಥಾನದಲ್ಲಿ ಈ ಪ್ರೇಮಿಗಳು ಸಪ್ತಪದಿ ತುಳಿದಿದ್ದಾರೆ. ಸಬೀನಾ ಪಲ್ಲವಿಯಾಗಿದ್ದು, ಇಷ್ಟಪಟ್ಟು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಪಟ್ಟಣದ
ಪೊಲೀಸ್ ಠಾಣೆಗೆ ತೆರಳಿ ತಾನು ತನ್ನ ಇಚ್ಚೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾಳೆ. ವಿವಾಹದ ಸಂದರ್ಭದಲ್ಲಿ ನೂರಾರು ಸೇನೆ ಕಾರ್ಯಕರ್ತರನ್ನು ಹೊರತುಪಡಿಸಿ ಪ್ರೇಮಿಗಳ ಸಂಬಂಧಿಗಳು ಪಾಲ್ಗೊಂಡಿರಲಿಲ್ಲ. ಜಾತಿ ಜಾತಿ ಅಂತ ಯಾಕೆ ಬಡಿದಾಡಬೇಕು. ನವದಂಪತಿಗಳಿಗೆ ಶುಭ ಕೋರಿ ಅಷ್ಟು ಸಾಕು...











Click it and Unblock the Notifications