ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ನಂ.1 ಯೋಜನೆ ಸದ್ಯದಲ್ಲೇ ಜಾರಿ

By * ರೋಹಿಣಿ ಬಳ್ಳಾರಿ
|
Google Oneindia Kannada News

Suresh Kumar
ಬಳ್ಳಾರಿ. ಮೇ 12 : ಬಳ್ಳಾರಿ, ಮೈಸೂರು, ಮಂಗಳೂರು ಮತ್ತಿತರ ಕಡೆಗಳಲ್ಲಿ ಬೆಂಗಳೂರು ಒನ್ ಮಾದರಿಯಲ್ಲಿ 'ನಂ. 1' ಯೋಜನೆ ಜೂನ್ 12ರೊಳಗಾಗಿ ಪ್ರಾರಂಭ ಆಗಲಿದೆ ಎಂದು ನಗರಾಭಿವೃದ್ಧಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಎಸ್. ಸುರೇಶ್‌ ಕುಮಾರ್ ಅವರು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಪತ್ರಕರ್ತರ ಜೊತೆ ಬುಧವಾರ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಂ.1 ಯೋಜನೆ ಜಾರಿಗೆ ಬಂದಲ್ಲಿ ಒಂದೇ ಸೂರಿನಲ್ಲಿ ವಿದ್ಯುತ್, ನೀರು ಆಸ್ತಿ ತೆರಿಗೆ ಮತ್ತಿತರ ಕರಗಳ ಶುಲ್ಕವನ್ನು ಪಾವತಿಸಲು ಅನುಕೂಲ ಆಗಲಿದೆ. ಬೆಂಗಳೂರಿನಲ್ಲಿ 60 ಕೇಂದ್ರಗಳಲ್ಲಿ ಬೆಂಗಳೂರು ಒನ್' ಸ್ಥಾಪಿಸಲಾಗಿದ್ದು ಆದಾಯ ಗಳಿಕೆಯಲ್ಲಿ ಪ್ರಗತಿ ಸಾಧಿಸಿವೆ ಎಂದರು.

ದೇಶದಲ್ಲಿ ಕರ್ನಾಟಕ ಪಾಲಿಕೆಗಳ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅನಧಿಕೃತ ಕೊಳಾಯಿಗಳ ವಿವರಗಳನ್ನು ಪಡೆದು ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೋನಿಗಳಿಗೆ ಆದ್ಯತೆ ನೀಡಿ ಸಕ್ರಮಗೊಳಿಸಬೇಕು. ಮಹಾನಗರ ಪಾಲಿಕೆಗಳು ನಗರ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಪಾಲಿಕೆ ವತಿಯಿಂದ ನಿರ್ಮಾಣವಾದ 30 ಉದ್ಯಾನವನಗಳಿಗೆ ಕುಡಿಯುವ ನೀರು, ಶೌಚಾಲಯ ಕಲ್ಪಿಸಬೇಕು ಎಂದರು.

ಪ್ರಗತಿ ಪರಿಶೀಲನೆ :
ಬಳ್ಳಾರಿ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆಯುತ್ತಿರುವ 100 ಕೋಟಿ ರು. ಕಾಮಗಾರಿಗಳ ವಿವರಗಳನ್ನು ಪಡೆದ ಅವರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಭೆಯಲ್ಲಿ ಬಳ್ಳಾರಿ ಶಾಸಕ ಕೆ.ಎಂ.ಎಫ್‌ನ ರಾಜ್ಯಾಧ್ಯಕ್ಷ ಜಿ. ಸೋಮಶೇಖರರೆಡ್ಡಿ, ಸಂಸದೆ ಜೆ. ಶಾಂತ, ಮೇಯರ್ ನೂರ್ ಜಹಾನ್, ಉಪ ಮೇಯರ್ ತೂರ್ಪು ಯಲ್ಲಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬುಡಾ ಅಧ್ಯಕ್ಷ ಗುರುಲಿಂಗನಗೌಡ, ಜಿಲ್ಲಾಧಿಕಾರಿ ಬಿ. ಶಿವಪ್ಪ, ಮಹಾನಗರ ಪಾಲಿಕೆ ಆಯುಕ್ತ ತಿಮ್ಮಪ್ಪ, ಬುಡಾ ಆಯುಕ್ತ ಎನ್. ರಾಜು, ಮತ್ತಿತರ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X