2011ಕ್ಕೆ ಎಲ್ಲರ ಕೈಗೂ ಎಪಿಕ್ ಕಾರ್ಡ್
ಬೆಂಗಳೂರು,
ಮೇ.11: ಡಿಸೆಂಬರ್ 2011 ರ ಹೊತ್ತಿಗೆ ದೇಶದ ಎಲ್ಲಾ 76 ಕೋಟಿ ಜನ ಮತದಾರರಿಗೆ ಎಲೆಕ್ಟ್ರಾನಿಕ್ ಫೋಟೋ ಐಡೆಂಟಿಟಿ ಕಾರ್ಡ್(EPIC) ವಿತರಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ನವೀನ್ ಬಿ .ಚಾವ್ಲಾ ಅವರು ಹೇಳಿದರು. id="toptextpromo">ರಾಜ್ಯ
ಚುನಾವಣಾ ಆಯೋಗದ ವಜ್ರಮಹೋತ್ಸವದ ಸವಿನೆನಪಿಗಾಗಿ ನಗರದ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿರುವ ವಿಶೇಷ ಚಿತ್ರ ಪ್ರದರ್ಶನವನ್ನು ವೀಕ್ಷಿಸಿ, ನಂತರ ಸುದ್ದಿಗಾರರೊಂದಿಗೆ ಚಾವ್ಲಾ ಮಾತನಾಡಿದರು. ಈಗಾಗಲೇ ಶೇ.85 ರಷ್ಟು ಮತದಾರರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಮುಂಬರುವ ವರ್ಷದ ಕೊನೆಯ ಹೊತ್ತಿಗೆ ಎಲ್ಲರಿಗೂ ಎಪಿಕ್ ಕಾರ್ಡ್ ದೊರೆಯಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಮತದಾರರ
ಹೆಸರು ಕಣ್ಮರೆ, ಮತಪಟ್ಟಿ ದೋಷ ಮುಂತಾದವುಗಳ ಬಗ್ಗೆ ಸಾಕಷ್ಟು ನಿಗಾವಹಿಸಲಾಗಿದೆ. ನಮಗೆ ನಗರವಾಸಿಗಳಿಂದಲೇ ತೊಂದರೆಯಾಗುತ್ತಿರುವುದು .ಸ್ವಪ್ರೇರಣೆಯಿಂದ ಮುಂದೆ ಬಂದು ಮತಪಟ್ಟಿಯಲ್ಲಿನ ದೋಷ ಸರಿಪಡಿಸಿಕೊಳ್ಳುವುದಿಲ್ಲ. ಮತದಾನದ ಸಂದರ್ಭದಲ್ಲಿ ಬಂದು ತೊಂದರೆಕೊಡುವುದು ತಪ್ಪುತ್ತಿಲ್ಲ ಎಂದರು.











Click it and Unblock the Notifications