ಯುಪಿಎಸ್ ಸಿ : 16 ಅಭ್ಯರ್ಥಿಗಳು ಆಯ್ಕೆ

UPSC Building
ಬೆಂಗಳೂರು, ಮೇ. 7 : 2009 ನೆ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆ (UPSC)ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಈ ಬಾರಿ ಕಾಶ್ಮೀರದ ಪಾಶೀಲ್ ಶಾ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯದ 16 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ.

ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಹೆಸರುಗಳು ಮತ್ತು Rank List ನಲ್ಲಿ ಅವರು ಗಳಿಸಿರುವ ಸ್ಥಾನಗಳು (ಆವರಣದಲ್ಲಿ) ಈ ಕೆಳಗಿನಂತಿವೆ.

ಎನ್ ಎಸ್ ನಕುಲ್(31), ಭಾರತಿ ಹಳ್ಳಿಕೆರೆ(59), ಎನ್ ಮಂಜುಶ್ರೀ(65), ಯಶವಂತ್(106), ಚೇತನ್ ಗೌಡ(213), ಪೃಥ್ವಿ (226) ಗುರುಪ್ರಸಾದ್(275), ಬಿಕೆ ಪ್ರಸನ್ನಕುಮಾರ್(366), ದರ್ಶನಗೌಡ(467), ಎಂ ರಮೇಶ್ (601), ಸಿ ಸೋಮಣ್ಣ(700), ಐ ಪಿ ರೂಪಾ(716), ಕೆ ರಮೇಶ್(744), ಮಂಜುನಾಥ್(832) ನೇ ಸ್ಥಾನ ಗಳಿಸಿದ್ದಾರೆ.

ಉತ್ತೀರ್ಣಹೊಂದಿದ ಈ ಮೇಲಿನವರಲ್ಲಿ ಬಹುತೇಕರು ಯೂನಿವರ್ಸಲ್ ಕೋಚಿಂಗ್ ಸೆಂಟರ್, ಜೆಎಸ್ಎಸ್ ಮತ್ತು ಕೌಶಿಕ್ ಸರ್ವೋದಯ ಪ್ರತಿಷ್ಠಾನ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದಾರೆ. ಕೆಲವರು ದೆಹಲಿ, ಹೈದರಾಬಾದಿನ ಸ್ಪರ್ಧಾತ್ಮಕ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+