ಎಸ್ಎಸ್ಎಲ್ಸಿ : ಚಿಕ್ಕೋಡಿಯಲ್ಲಿ 785 ಡಿಸ್ಟಿಂಕ್ಷನ್

ಚಿಕ್ಕೋಡಿಯಲ್ಲಿ 2010ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 35,738 ವಿದ್ಯಾರ್ಥಿಗಳು ಕುಳಿತಿದ್ದರು. ಇದರಲ್ಲಿ ಒಟ್ಟು 27,895 ವಿದ್ಯಾರ್ಥಿಗಳು ಉತ್ತೀರ್ಣರಾಗುವದರ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಉಪನಿರ್ದೇಶಕರಾದ ಬಿ.ಜಿ. ನಾಯಕ ಅವರು ತಿಳಿಸಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 785 ಡಿಸ್ಟಿಂಕ್ಷನ್, 9634 ಪ್ರಥಮ ದರ್ಜೆ, 7143 ದ್ವಿತೀಯ ದರ್ಜೆ, 10,333 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಥಣಿಯಲ್ಲಿರುವ ಎಸ್.ಎಸ್. ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಗುಡಿ 614 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಅಥಣಿಯ ವಿದ್ಯಾವರ್ಧಕ ಪ್ರೌಢಶಾಲೆಯ ಮುರಗೇಶ ವಿಜಯಕುಮಾರ ಮಠಪತಿ 610 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಸಂಕೇಶ್ವರದ ಎಸ್.ಡಿ.ಇ. ಪ್ರೌಢಶಾಲೆಯ ಮಂಜುನಾಥ ಬಿದರಳ್ಳಿ 607 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.











Click it and Unblock the Notifications