44 ಡೀಮ್ಡ್ ವಿವಿಗಳ ಪ್ರವೇಶಕ್ಕೆ ಅನುಮತಿ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಳವೀರ್ ಭಂಡಾರಿ ಮತ್ತು ಸುಧಾ ವಿಶ್ರ ಅವರಿದ್ದ ವಿಭಾಗೀಯ ಪೀಠ ಸರ್ಕಾರ ಡೀಮ್ಡ್ ವಿಶ್ವವಿದ್ಯಾಲಯಗಳ ಕಾರ್ಯ ವೈಖರಿ ಪರಿಶೀಲಿಸಲು ಶಿಕ್ಷಣ ತಜ್ಞ ಪಿಎನ್ ಟಂಡನ್ ನೇತೃತ್ವದಲ್ಲಿ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಯ ವರದಿಯಲ್ಲಿ ದೇಶದ 130 ಡೀಮ್ಡ್ ವಿಶ್ವವಿದ್ಯಾಲಯಗಳ ಗುಣಮಟ್ಟ ಡೀಮ್ಡ್ ವಿಶ್ವವಿದ್ಯಾಲಯಗಳ ನಿಗದಿತ ಮಟ್ಟಕ್ಕಿಂತ ಕಡಿಮೆ ಇದ್ದು ಇವುಗಳ ಮನ್ನಣೆಯನ್ನು ರದ್ದು ಪಡಿಸುವಂತೆ ಸೂಚಿಸಿದೆ.
ಆದರೆ, ಈ ವರದಿಯೇ ಪ್ರಶ್ನಾರ್ಹವಾಗಿದ್ದು ಈ ಹಿನ್ನೆಲೆಯಲ್ಲಿ ಇಂಜಕ್ಷನ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಟಂಡನ್ ಅವರು ಪ್ರಸ್ತುತ ಡೀಮ್ಡ್ ವಿಶ್ವವಿದ್ಯಾಲಯವೊಂದರ ಮುಖ್ಯಸ್ಥರಾಗಿದ್ದು ಸರ್ಕಾರ ನೇಮಿಸಿರುವ ಸಮಿತಿಯ ಮುಖ್ಯಸ್ಥರಾಗಿರುವುದೂ ಗೊಂದಲ ಸೃಷ್ಟಿಸಿದೆ. ಕಳೆದ ಜನವರಿ 10ರಂದು ಸರ್ಕಾರ 44ಡೀಮ್ಡ್ ವಿಶ್ವವಿದ್ಯಾಲಯಗಳ ಡೀಮ್ಡ್ ಮಾನ್ಯತೆಯನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಡೀಮ್ಡ್ ವಿಶ್ವವಿದ್ಯಾಲಯಗಳು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದು, ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಯ ವಿಶ್ವಾಸಾರ್ಹತೆ ಬಗ್ಗೆ ಚರ್ಚೆಯಾಗಬೇಕಿದೆ ಎಂದಿವೆ.
ಸಮಿತಿಯು ಮೊದಲು ದೇಶದ 88 ವಿಶ್ವವಿದ್ಯಾಲಯಗಳು ಡೀಮ್ಡ್ ಮಾನ್ಯತೆಗೆ ಅನರ್ಹವಾಗಿವೆ ಎಂದು ಹೇಳಿ ನಂತರ 44 ವಿಶ್ವವಿದ್ಯಾಲಯಗಳಿಗೆ ಗುಣಮಟ್ಟ ಉತ್ತಮಪಡಿಸಿಕೊಳ್ಳಲು 3 ವರ್ಷ ಸಮಯಾವಕಾಶ ನೀಡಿ 44 ವಿವಿಗಳ ಮಾನ್ಯತೆ ರದ್ದುಪಡಿಸಿತ್ತು. ಪ್ರಸ್ತುತ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದು, ಸರ್ಕಾರದ ಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.












Click it and Unblock the Notifications