ಸಾಮನ್ಯ ಪ್ರವೇಶ ಪರೀಕ್ಷೆ ಕೀ ಉತ್ತರಗಳಿಗೆ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು,
ಮೇ.6: ಏಪ್ರಿಲ್ 28 ಹಾಗೂ 29ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ 2010ರ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ಪ್ರಶ್ನ ಪತ್ರಿಕೆಗಳ ಉತ್ತರಗಳನ್ನು (Answer Key) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಅಂತರ್ಜಾಲ
ತಾಣದಲ್ಲಿ
ಪ್ರಕಟಿಸಿದೆ.
id="toptextpromo">
ಗಣಿತ
ಹಾಗೂ ಸಸ್ಯಶಾಸ್ತ್ರ ಪ್ರಶ್ನ ಪತ್ರಿಕೆಗಳಲ್ಲಿ ಎಲ್ಲಾ 16 ಆವೃತ್ತಿಗಳಲ್ಲಿನ ಒಂದು ಪ್ರಶ್ನೆ ಅಸಮಂಜಸವಾಗಿತ್ತು. ಆದ ಕಾರಣ ಈ ಎರಡು ಪತ್ರಿಕೆಗಳಿಗೆ ತಲಾ ಒಂದೊಂದು ಗ್ರೇಸ್ ಅಂಕವನ್ನು ನೀಡಲಾಗುತ್ತಿದೆ. ಭೌತಶಾಸ್ತ್ರದಲ್ಲೂ ವಿದ್ಯಾರ್ಥಿಗಳಿಗೆ ಎರಡು ಗ್ರೇಸ್ ಅಂಕಗಳು ಲಭಿಸಲಿವೆ. id='are-slot-1' class='oiad oi-axt oiadv'> id='top-searched-articles'>ಗಣಿತ
ಹಾಗೂ ಸಸ್ಯಶಾಸ್ತ್ರದ ಪ್ರಶ್ನ ಪತ್ರಿಕೆಗಳ ಬಹುಆಯ್ಕೆ ಉತ್ತರಗಳಲ್ಲಿ ಎಲ್ಲವೂ ಸರಿಯಾಗಿದ್ದವು. ಈ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಒಂದನ್ನು ಮಾರ್ಕ್ ಮಾಡಿದ್ದರೆ ಅವರಿಗೆ ಗ್ರೇಸ್ ಅಂಕ ಲಭಿಸಲಿದೆ. ರಸಾಯನ ಶಾಸ್ತ್ರ ಪತ್ರಿಕೆಗೆ ಯಾವುದೇ ಗ್ರೇಸ್ ಅಂಕ ಲಭಿಸುತ್ತಿಲ್ಲ. ಪ್ರಾಧಿಕಾರ ಪ್ರಕಟಿಸಿರುವ ಕೀ ಉತ್ತರಗಳ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದರೆ ಮೇ.11ರ ಒಳಗೆ ವಿದ್ಯಾರ್ಥಿಗಳು ಅಥವಾ ಪೋಷಕರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.











Click it and Unblock the Notifications