2015 ವೇಳೆಗೆ 5ಸಾವಿರ ಮೆ.ವ್ಯಾ ಪವನ ವಿದ್ಯುತ್
ಹೈದರಾಬಾದ್,
ಮೇ.5: 2015 ರ ಹೊತ್ತಿಗೆ ದೇಶದ ಗಾಳಿ ವಿದ್ಯುತ್ ಉತ್ಪಾದನೆ 5000 ಮೆಗಾವ್ಯಾಟ್ ಗಳಷ್ಟು ಹೆಚ್ಚುವರಿಯಾಗಲಿದೆ ಎಂದು ಗಾಳಿ ಟರ್ಬೈನ್ ಉತ್ಪಾದಕರ ಸಂಘ ( iwtma) ಪ್ರಕಟಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಡಿವಿ ಗಿರಿ ದೇಶದಲ್ಲಿ ಈಗ ಪವನ ಶಕ್ತಿಯಿಂದ ಒಟ್ಟು 48,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದ್ದು ಹೊಸ ತಂತ್ರಜ್ಞಾನದ ಮೂಲಕ ಒಟ್ಟು 1.2ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಹೇಳಿದರು. id="toptextpromo">ಒಂದು
ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದಿಸಲು 5ರಿಂದ 6.5 ಕೋಟಿ ರುಪಾಯಿಗಳ ಅವಶ್ಯಕತೆ ಇದ್ದು ಇದು ಸೌರಶಕ್ತಿಗಿಂತ ಕಡಿಮೆ ಎಂದೂ ಅವರು ಹೇಳಿದರು. ದೇಶದಲ್ಲಿ ಈಗ 11,000 ಮೆಗಾ ವ್ಯಾಟ್ ಗಳಷ್ಟು ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದ್ದು ಶೇ.15 ರಿಂದ 20 ರಷ್ಟನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಗಿರಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ದೇಶದ
13 ಪವನ ವಿದ್ಯುತ್ ಯಂತ್ರಗಳ ಹಾಗೂ ಉಪಕರಣಗಳ ತಯಾರಕರುಗಳ ಸಂಘದಲ್ಲಿದ್ದು ಸರ್ಕಾರ ಪವನ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ನೀತಿಯಲ್ಲಿ ಸುಧಾರಣೆ ತರುವಂತೆ ಒತ್ತಾಯಿಸುತ್ತಿದ್ದಾರೆ. 2008-09ರಲ್ಲಿ 1,485ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದ್ದು, 2009-10 ರಲ್ಲಿ 1,576 ಮೆಗಾ ವ್ಯಾಟ್ ಸಾಮರ್ಥ್ಯದ ಯಂತ್ರಗಳನ್ನು ಅಳವಡಿಸಲಾಗಿದೆ ಎಂದೂ ಅವರು ತಿಳಿಸಿದರು. ಈ ಹಣಕಾಸು ವರ್ಷದಲ್ಲಿ ಉತ್ಪಾದನೆ 2,000-2,200 ಮೆಗಾ ವ್ಯಾಟ್ ಗಳಷ್ಟು ಹೆಚ್ಚಲಿದೆ ಎಂದೂ ಅವರು ಹೇಳಿದರು.











Click it and Unblock the Notifications