ದೇಶದ ರಫ್ತು ಮೌಲ್ಯದಲ್ಲಿ ಇಳಿಮುಖ

Minister Anand Sharma
ನವದೆಹಲಿ, ಮೇ.5: ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ದೇಶದ ಈ ವರ್ಷದ ಒಟ್ಟು ರಫ್ತು ಮೌಲ್ಯ 170 ಬಿಲಿಯನ್ ಡಾಲರ್ ಗಳಿಗಿಂತ ಅಧಿಕವಾಗಬಹುದಾದರೂ ಕಳೆದ ವರ್ಷಕ್ಕಿಂತ ಕಡಿಮೆಯಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮ ಹೇಳಿದ್ದಾರೆ.

ಕಳೆದ ವರ್ಷದ ಒಟ್ಟು ರಫ್ತು ಮೌಲ್ಯ 185 ಬಿಲಿಯನ್ ಡಾಲರ್ ಗಳಾಗಿತ್ತು. ನವದೆಹಲಿಯಲ್ಲಿ ಕೈಗಾರಿಕಾ ಒಕ್ಕೂಟ ಫಿಕ್ಕಿ ಏರ್ಪಡಿಸಿದ್ದ ಸಮಾರಂಭವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮ ಅವರು ದೇಶದ ಒಟ್ಟು ರಪ್ತು 170 ಬಿಲಿಯನ್ ಡಾಲರ್ ಗಳಿಗಿಂತ ಅಧಿಕವಾಗಬಹುದಾದರೂ , ಕೊರತೆ ಶೇಕಡಾವಾರು ಲೆಕ್ಕದಲ್ಲಿ ಏಕ ಅಂಕಿಯಲ್ಲಿರುತ್ತದೆ ಎಂದರು.

ಈ ವಾರದ ಕೊನೆಯಲ್ಲಿ ಅಧಿಕೃತ ಅಂಕಿ ಅಂಶಗಳನ್ನು ಪ್ರಕಟಿಸಲಿದ್ದು ಕಳೆದ ಅಕ್ಟೋಬರ್ 2008 ರಿಂದ ದೇಶದ ರಪ್ತು 13 ತಿಂಗಳ ಕಾಲ ಸತತ ಕುಸಿತ ದಾಖಲಿಸಿತ್ತು. 2009ರ ಮೇ ತಿಂಗಳಿನಲ್ಲಿ ರಫ್ತು ಗಣನೀಯ ಕುಸಿತ ದಾಖಲಿಸಿದ್ದು ಶೇ.39 ಕುಸಿತ ದಾಖಲಿಸಿತ್ತು. ಆದರೆ 2009 ರ ಡಿಸೆಂಬರ್ ನಲ್ಲಿ ಉತ್ತಮ ಏರಿಕೆಯನ್ನು ದಾಖಲಿಸಿತು ಎಂದು ಶರ್ಮ ಹೇಳಿದರು. ಸರ್ಕಾರ ಪ್ರಕಟಿಸಿದ ಆರ್ಥಿಕ ಉತ್ತೇಜನ ಮತ್ತು ರಫ್ತು ಉತ್ತ್ತೇಜನ ಪ್ಯಾಕೇಜ್ ಹಾಗೂ ರಪ್ತುದಾರರಿಗೆ ಬಡ್ಡಿ ಸಬ್ಸಿಡಿ ನೀಡಿಕೆ ಕ್ರಮ ಗಳಿಂದ ರಪ್ತು ಹೆಚ್ಚಿದೆ ಎಂದು ಅವರು ಹೇಳಿದರು.

ಕಳೆದ ಆಗಸ್ಟ್ 2009 ರಲ್ಲಿ ದೇಶದ ವಿದೇಶಿ ವ್ಯಾಪಾರ ನೀತಿಯಲ್ಲಿ ಮಾರುಕಟ್ಟೆ ಆಧಾರಿತ ಉತ್ತೇಜನ ಕ್ರಮಗಳನ್ನು ಪ್ರಕಟಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ದೇಶದ ರಫ್ತು ಶೇ.34.8 ಹೆಚ್ಚಳ ದಾಖಲಿಸಿದ್ದು ಒಟ್ಟು 16.09 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿತ್ತು. ಹಿಂದಿನ ವರ್ಷದ ಫೆಬ್ರವರಿಯಲ್ಲಿ ದೇಶದ ರಪ್ತು 11.94 ಬಿಲಿಯನ್ ಡಾಲರ್ ಗಳಿಗೆ ಕುಸಿದಿತ್ತು ಎಂದು ಆನಂದ್ ಶರ್ಮ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+