ಮೇ 6ರಂದು ಎಸ್ ಎಸ್ ಎಲ್ ಸಿ ಫಲಿತಾಂಶ

Vishweshwar Hegde Kageri
ಬೆಂಗಳೂರು, ಮೇ 5 : 2010ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಮೇ 6ನೇ ತಾರೀಖು, ಗುರುವಾರ ಮಧ್ಯಾಹ್ನ ಪ್ರಕಟಿಸುವುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ದಿನಾಂಕ ಸಂಬಂಧಿಸಿದಂತೆ ಉದ್ಭವವಾಗಿದ್ದ ಎಲ್ಲ ಊಹಾಪೋಹಗಳಿಗೆ ಮಂಡಳಿ ಮಂಗಳ ಹಾಡಿದ್ದು ಮೇ 6ನೇ ತಾರೀಖು ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.

ಗುರವಾರ ಮಧ್ಯಾಹ್ನ 2 ಗಂಟೆಗೆ ಆಯಾ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಲಭ್ಯವಾಗಲಿದೆ. ಅದಕ್ಕೂ ಮೊದಲು ಮೇ 6ರ ಗುರುವಾರ ಬೆಳಿಗ್ಗೆ 7 ಗಂಟೆಗೆ ದಟ್ಸ್ ಕನ್ನಡ ಸೇರಿದಂತೆ ಇತರ ಅಂತರ್ಜಾಲ ತಾಣಗಳಲ್ಲಿ ಎಸ್ ಎಸ್ ಎಸ್ ಸಿ ಫಲಿತಾಂಶವನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಿಳಿದುಕೊಳ್ಳಬಹುದು.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಪರೀಕ್ಷೆಯಲ್ಲಿ ಪಾಸಾದವರು ಮುಂದಿನ ವಿದ್ಯಾಭ್ಯಾಸವನ್ನು ಅತ್ಯಂತ ಉತ್ಸಾಹದಿಂದ ಮುಂದುವರಿಸಬೇಕು ಮತ್ತು ಪಾಸಾಗದವರು ನಿರಾಸೆಯಾಗದೆ, ಕ್ರೀಡಾಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಬೇಕು ಎಂದು ಹೇಳಿದರು. ಪಾಲಕರು ಮತ್ತು ಶಿಕ್ಷಕರು ಪಾಸಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪಿಯುಸಿ ಫಲಿತಾಂಶ ಕೂಡ ಮೇ 6ರಂದೇ ಪ್ರಕಟವಾಗಲಿದ್ದು, ಸಂಜೆ 6ರ ನಂತರ ಅಂತರ್ಜಾಲ ತಾಣಗಳಲ್ಲಿ ಲಭ್ಯವಾಗಲಿದೆ.

ದಟ್ಸ್ ಕನ್ನಡದಲ್ಲಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ಕಿಸಿ

ಎಸ್ಎಸ್ಎಲ್ ಸಿ : ಚಿಕ್ಕೋಡಿ ಫಸ್ಟ್, ಬೀದರ್ ಲಾಸ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+