ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಗೆ ಭಾರತದ ಡೀನ್
ಚಿಕಾಗೋ,
ಮೇ.5:102 ವರ್ಷಗಳ ಇತಿಹಾಸವಿರುವ ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಬಿಸಿನೆಸ್ ಸ್ಕೂಲಿಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ನಿತಿನ್ ನೊಹ್ರಿಯಾ ಅವರನ್ನು ಹತ್ತನೇ ಡೀನ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ . id="toptextpromo">ನೊರಿಯಾ
ಅವರು ಜುಲೈ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೊರಿಯಾ ಅವರು ಈ ಹಿಂದೆ 1988 ರಿಂದ ಸ್ಕೂಲ್ ನ ಸೀನಿಯರ್ ಅಸೋಸಿಯೇಟ್ ಡೀನ್ ಆಗಿ ಕೆಲಸ ಮಾಡಿದ್ದರು. ಇದೇ ಸ್ಕೂಲಿನಲ್ಲಿ ಕೆಲಸ ಮಾಡಿ ಈಗ ಡೀನ್ ಸ್ಥಾನಕ್ಕೇರುತ್ತಿರುವದು ಹೆಚ್ಚು ಹೆಮ್ಮೆ. ಸಂತಸ ಹಾಗೂ ಜವಾಬ್ದಾರಿಯನ್ನು ತಂದಿದೆ ಎಂದು ಹೇಳಿದ ನೊರಿಯಾ ಅವರು ಸ್ಕೂಲ್ ಈಗ ಎರಡನೇ ಶತಮಾನದತ್ತ ಕಾಲಿರಿಸುತ್ತಿದ್ದು ಉತ್ತಮ ಬಿಸಿನೆಸ್ ಸ್ಕೂಲ್ ಆಗಿ ಮುಂದಿನ 100 ವರ್ಷ ಪ್ರಕಾಶಿಸಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>1984
ರಲ್ಲಿ ಐಐಟಿ ಮುಂಬೈನಿಂದ ರಸಾಯನಿಕ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನೊರಿಯಾ ಅವರು 2007 ರಲ್ಲಿ ಅದೇ ಸಂಸ್ಥೆಯಿಂದ ಹಳೇ ವಿದ್ಯಾರ್ಥಿಗಳಿಗೆ ನೀಡಲಾಗುವ ಚಿನ್ನದ ಪದಕವನ್ನೂ ಪಡೆದಿದ್ದಾರೆ. 1988ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಅದೇ ವರ್ಷ ಹಾರ್ವರ್ಡ್ ಸ್ಕೂಲ್ ಸೇರಿದ ಅವರು 1993 ರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ, 1999 ರಲ್ಲಿ ರಿಚರ್ಡ್ ಪಿ ಚಾಪ್ ಮಾನ್ ಪ್ರೊಫೆಸರ್ ಆಗಿ ಭಡ್ತಿ ಪಡೆದಿದ್ದರು.











Click it and Unblock the Notifications