ಮೇ 10ಕ್ಕೆ ಮುಂಚೆ ಪಿಯು ಫಲಿತಾಂಶ

Karnataka PUC results 2010
ಬೆಂಗಳೂರು, ಮೇ 4 : ಎರಡನೇ ಪಿಯುಸಿ ಪರೀಕ್ಷೆ ಫಲಿತಾಂಶಗಳು ಈ ಮುಂಚೆ ವರದಿಯಾಗಿರುವಂತೆ ಮೇ 5ರ ಬುಧವಾರದಂದು ಪ್ರಕಟವಾಗುವುದಿಲ್ಲ. ಮೇ 10 ಅಥವಾ ಅದಕ್ಕೆ ಮುಂಚಿನ ಯಾವುದೇ ದಿನಾಂಕದಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಪಿಯುಸಿ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಮಂಗಳವಾರ ಧೃಡಪಡಿಸಿದ್ದಾರೆ.

ಮೇ 5ರಂದೇ ಫಲಿತಾಂಶ ಸಿಗುವುದೆಂಬ ಸುದ್ದಿಯಾಗಿತ್ತು, ಆದರೆ ಬುಧವಾರ ಪ್ರಕಟಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ದಟ್ಸ್ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಫಲಿತಾಂಶಗಳ ಗಣಕೀಕರಣ ಮುಕ್ತಾಯ ಹಂತ ತಲುಪಿದೆ. ಹಿರಿಯ ಅಧಿಕಾರಿಗಳು ಸೂಚನೆ ನೀಡಿದ ದಿನಾಂಕದಂದು ಫಲಿತಾಂಶ ಲಭ್ಯವಾಗುತ್ತದೆ, ಅಲ್ಲಿಯವರೆಗೆ ವಿದ್ಯಾರ್ಥಿಗಳು ತಾಳ್ಮೆ ವಹಿಸಬೇಕೆಂದು ಎಂದು ಮಂಡಳಿಯ ವಕ್ತಾರರು ಮನವಿ ಮಾಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಮೇ 7 ಶುಕ್ರವಾರದಂದು ಪಿಯುಸಿ ಫಲಿತಾಂಶಗಳು ಪ್ರಕಟವಾಗಲಿದೆ. ಈ ಕುರಿತು ಮಾಹಿತಿಗಾಗಿ ದಟ್ಸ್ ಕನ್ನಡ ವೀಕ್ಷಿಸುತ್ತಿರಿ. ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 5ರಂದು ದಟ್ಸ್ ಕನ್ನಡ ಸೇರಿದಂತೆ ಇತರ ಅಂತರ್ಜಾಲ ತಾಣಗಳಲ್ಲಿ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+