ಜೂನ್ 27ಕ್ಕೆ ಶಶಿ-ಸುನಂದಾ ಮದುವೆ?
ಬೆಂಗಳೂರು,
ಮೇ. 3 : ಜೂನ್ 27 ರಂದು ತುಮಕೂರು ರಸ್ತೆಯಲ್ಲಿರುವ ಬಾಲಿವುಡ್ ನಟ ಸಂಜಯ್ ಖಾನ್ ಮಾಲೀಕತ್ವದ ಪಾಮ್ಸ್ ರಿಸಾರ್ಟ್ ನಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹಾಗೂ ಅವರ ಗರ್ಲ್ ಫ್ರೆಂಡ್ ಸುನಂದಾ ಪುಷ್ಕರ್ ಅವರ ವಿವಾಹ ನಡೆಯಲಿದೆ ಎಂದು ಅಂಶ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. id="toptextpromo">ಜೂನ್
27 ರಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿರುವ ಸುನಂದಾ ಈಗಾಗಲೇ ದುಬೈ, ಮುಂಬೈ ಮತ್ತು ದೆಹಲಿಯಲ್ಲಿರುವ ತಮ್ಮ ಆಪ್ತರಿಗೆ, ಬಂಧುಗಳಿಗೆ ವಿಷಯವನ್ನು ತಿಳಿಸಿದ್ದಾರೆ. ಅವರ ಕುಟುಂಬದಿಂದ ಹಸಿರು ನಿಶಾನೆ ದೊರೆತಿದೆ. ಜೂನ್ 27 ರಂದು ಪಾಮ್ಸ್ ರಿಸಾರ್ಟ್ ನಲ್ಲಿ ರೂಮ್ ಗಳನ್ನು ಬುಕ್ ಮಾಡಲಾಗಿದೆ. ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿರುವ ಸಂಜಯ್ ಖಾನ್ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮದುವೆ ವಿಷಯವನ್ನು ಪ್ರಸ್ತಾಪಿಸಿರುವ ಈ ಜೋಡಿಗಳು, ರಿಸಾರ್ಟ್ ಬುಕ್ಕಿಂಗ್ ವಿಷಯವನ್ನೂ ತಿಳಿಸಿದ್ದಾರೆ. ಇದಕ್ಕೆ ಖುಷಿಯಿಂದಲೇ ಸಮ್ಮತಿಸಿರುವ ಖಾನ್, ಪಾಮ್ಸ್ ರಿಸಾರ್ಟ್ ಗೆ ಹಾರ್ಟ್ಲಿ ವೆಲ್ ಕಂ ಹೇಳಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಕುರಿತು ಪ್ರತಿಕ್ರಿಯೆ ನೀಡಿರುವ ಸಂಜಯ್ ಖಾನ್ ಈ ಬಗ್ಗೆ ನನಗೇನು ಗೊತ್ತಿಲ್ಲ. ಅವರಿಬ್ಬರೂ ಪಾಮ್ಸ್ ನಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರೆ ಸಂತೋಷದ ಸಂಗತಿ. ಆದರೆ, ಬುಕ್ಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ರಿಸಾರ್ಟ್ ಉಸ್ತುವಾರಿ ನೋಡಿಕೊಳ್ಳುವವರನ್ನು ಕೇಳಬೇಕು ಎಂದಿದ್ದಾರೆ. ಸೋಶಿಯಲ್ ನೆಟ್ ವರ್ಕ್ ಟ್ವಿಟ್ಟರ್ ನಿಂದ ಶಶಿ ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಬಹುಶಃ ಮದುವೆ ತಯಾರಿ ನಡೆಸಿರಬಹುದು. ಎನಿವೇ ಗುಡ್ ಲಕ್...











Click it and Unblock the Notifications