ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಕ್ಷಣದಲ್ಲಿ ಉಗ್ರರ ದಾಳಿ : ಅಮೆರಿಕ ಎಚ್ಚರಿಕೆ

By Prasad
|
Google Oneindia Kannada News

High alert in New Delhi
ನವದೆಹಲಿ, ಮೇ. 1 : ರಾಷ್ಟ್ರ ರಾಜಧಾನಿಯ ಜನ ನಿಬಿಡ ಪ್ರದೇಶದಲ್ಲಿ 'ಯಾವುದೇ ಕ್ಷಣದಲ್ಲಿ' ಭಯೋತ್ಪಾದಕರು ದಾಳಿ ನಡೆಸಬಹುದೆಂದು ಅಮೆರಿಕಾ ಭಾರತಕ್ಕೆ ಎಚ್ಚರಿಕೆ ನೀಡಿದೆ.

ದೆಹಲಿಯ ಜನನಿಬಿಡ ಪ್ರದೇಶಗಳಾದ ಕನಾಟ್ ಪ್ಲೇಸ್, ಗ್ರೇಟರ್ ಕೈಲಾಶ್, ಕರೋಲ್ ಭಾಗ್, ಮೆಹರೌಲಿ, ಸರೋಜಿನಿ ನಗರ ಮತ್ತು ಚಾಂದನಿ ಚೌಕ್ ಅಂಥ ಪ್ರದೇಶಗಳು ಭಯೋತ್ಪಾದಕರ ಗುರಿಯಾಗಿದೆ ಎಂದೂ ನಿಖರವಾಗಿ ಅಮೆರಿಕಾ ಹೇಳಿದೆ. ವಾರಾಂತ್ಯಗಳಲ್ಲಿ ಈ ಪ್ರದೇಶಗಳು ಹೆಚ್ಚಿನ ಜನಸಾಂದ್ರತೆಯಿಂದ ಕೂಡಿರುತ್ತವೆ.

ಪ್ರವಾಸದಲ್ಲಿರುವ ಅಮೆರಿಕಾದ ಪ್ರಜೆಗಳನ್ನು ಮತ್ತು ಈ ಪ್ರದೇಶಗಳಿಗೆ ಭೇಟಿ ನೀಡುವ ವಿದೇಶಿಯರನ್ನು ಎಚ್ಚರಿಸಲೆಂದೇ ನೀಡಲಾಗಿದ್ದ ಹೇಳಿಕೆಯಲ್ಲಿ ಈ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ ಯಾವುದೇ ಸಮಯದಲ್ಲಿ ಆಗಬಹುದು ಎಂದು ಎಚ್ಚರಿಸಿದೆ.

ಈ ಜನನಿಬಿಡ ಪ್ರದೇಶದಲ್ಲಿ ಅಡ್ಡಾಡಬಾರದು. ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಯಾವುದೇ ನಿರ್ಲಕ್ಷಿತ ಪೊಟ್ಟಣ ಗಮನಕ್ಕೆ ಬಂದರೆ ಕೂಡಲೆ ಅಲ್ಲಿಂದ ತೆರಳಬೇಕು ಮತ್ತು ಅಧಿಕಾರಿಗಳ ಗಮನಕ್ಕೆ ತರಬೇಕು. ಯಾವಾಗಲೂ ಎಚ್ಚರದಿಂದ ಇರಬೇಕು ಎಂದು ಅಮೆರಿಕ ಹೇಳಿದೆ.

ಅಮೆರಿಕದ ಎಚ್ಚರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಕರೆ ನೀಡಿದೆ. ಅಮೆರಿಕದ ಹೇಳಿಕೆ ಬಂದ ಹಿಂದೆಯೇ ಆಸ್ಟ್ರೇಲಿಯಾ ಕೂಡ ಈ ಪ್ರದೇಶಗಳಿಂದ ದೂರ ಇರುವಂತೆ ಪ್ರವಾಸಿ ಆಸ್ಟ್ರೇಲಿಯನ್ನರಿಗೆ ಎಚ್ಚರಿಗೆ ನೀಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X