ಸಿಡಿಯಲ್ಲಿರುವುದು ನಿತ್ಯಾನಂದ: ವಿಧಿ ವಿಜ್ಞಾನ ವರದಿ

It's official, Nithyananda is the man in sex tape
ಬೆಂಗಳೂರು, ಮೇ.1: ವಿಡಿಯೋ ಸಿಡಿಯಲ್ಲಿ ಇರುವುದು ಸ್ವಾಮಿ ನಿತ್ಯಾನಂದ ಎಂಬುದನ್ನು ಹೈದರಾಬಾದ್ ವಿಧಿ ವಿಜ್ಞಾನ ಸಂಸ್ಥೆಯಿಂದ ಬಂದ ವರದಿ ಖಚಿತಪಡಿಸಿದೆ. ರಾಸಲೀಲೆ ಸಿಡಿಯಲ್ಲಿರುವುದು ನಿತ್ಯಾನಂದ ಎಂಬುದು ಖಚಿತವಾದ ಕಾರಣ ನಿತ್ಯಾನಂದನಿಗಿದ್ದ ಕೊನೆಯ ಬಾಗಿಲು ಮುಚ್ಚಿದಂತಾಗಿದೆ.

ಸಿಐಡಿ ಪೊಲೀಸರು ಸಲ್ಲಿರುವ ತನ್ನ ವಿರುದ್ಧದ ಎಲ್ಲಾ ದೂರುಗಳನ್ನು ನಿತ್ಯಾನಂದ ನಿರಾಕರಿಸಿದ್ದ. ಇದೀಗ ಹೈದರಾಬಾದ್ ವಿಧಿ ವಿಜ್ಞಾನ ಸಂಸ್ಥೆಯಿಂದ ಬಂದ ವರದಿ ಕರ್ನಾಟಕ ಪೊಲೀಸರಿಗೆ ಮತ್ತಷ್ಟು ಬಲ ತಂದಂತಾಗಿದೆ. ಲೈಂಗಿಕ ಸಿಡಿಯಲ್ಲಿರುವುದು ತಾನಲ್ಲ. ಇದು ನಕಲಿ ಸಿಡಿ ಎಂದು ಸ್ವಾಮಿ ನಿತ್ಯಾನಂದ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದರು.

ಮೇ.12ರ ತನಕ ನ್ಯಾಯಾಂಗ ಬಂಧನದಲ್ಲಿರುವ ನಿತ್ಯಾನಂದನಿಗಿದ್ದ ಎಲ್ಲಾ ಬಾಗಿಲುಗಳು ಮುಚ್ಚಿದಂತಾಗಿವೆ. ನಿತ್ಯಾನಂದನ ಕಾರು ಚಾಲಕ ಲೆನಿನ್ ಕುರುಪ್ಪನ್ ಕೊಟ್ಟಿರುವ ಒಟ್ಟು 30 ಸಿಡಿಗಳಲ್ಲಿ ಐದು ಮಂದಿ ನಟಿಯರು ರಾಸಲೀಲೆಯಲ್ಲಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅವರಲ್ಲಿ ಒಬ್ಬರು ಎನ್ನಲಾಗಿರುವ ನಟಿ ರಂಜಿತಾರನ್ನು ವಿಚಾರಣೆಗೆ ಕರೆತರುವ ಬಗ್ಗೆ ಸಿಐಡಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ನಿತ್ಯಾನಂದ ರಾಸಲೀಲೆ ವಿಡಿಯೋ ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಭಾರಿ ಕೋಲಾಹಲ ಉಂಟು ಮಾಡಿತ್ತು. ನಿತ್ಯಾನಂದನೊಂದಿಗೆ ವಿಡಿಯೋದಲ್ಲಿರುವ ನಟಿ ತಾನಲ್ಲ ಎಂದು ಸ್ಪಷ್ಟಪಡಿಸಿದ ರಂಜಿತಾ, ಏ.30ರಂದು ಗೂಗಲ್ ಹಾಗೂ ಯೂಟ್ಯೂಬ್ ಗೆ ನೋಟೀಸ್ ಜಾರಿ ಮಾಡಿ ವಿಡಿಯೋಗಳನ್ನು ಈ ತಾಣಗಳಿಂದ ಹೊರತೆಗೆಯುವಂತೆ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+